ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತು ಕುಟುಂಬಶ್ರೀ ಸಿಡಿಎಸ್ ಆಯ್ಕೆ ನಡೆಯಿತು.
ಕೇರಳ ರಾಜ್ಯ ಸಾಕ್ಷರತಾ ಮಿಷನ್ ಪ್ರೇರಕ್ ಹಾಗೂ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಜಲಜಾಕ್ಷಿ ಅವರು ಅಧ್ಯಕ್ಷೆಯಾಗಿ ಹಾಗೂ ಹಾಲಿ ಉಪಾಧ್ಯಕ್ಷೆಯಾಗಿದ್ದ ಶಶಿಕಲಾ ಸ್ವರ್ಗ ಅವರು ಈ ಬಾರಿಯೂ ಉಪಾಧ್ಯಕ್ಷೆಯಾಗಿ ಅವಿರೋಧ ಆಯ್ಕೆಗೊಂಡರು. ನೂತನ ಸಿಡಿಎಸ್ ಪದಾಧಿಕಾರಿಗಳನ್ನು ಎಣ್ಮಕಜೆ ಗ್ರಾಮ ಪಂಚಾಯತು ಅಧ್ಯಕ್ಷ ಸೋಮಶೇಖರ ಜೆ.ಎಸ್. ಸಹಿತ ಆಡಳಿತ ಸಮಿತಿ ಅಭಿನಂದಿಸಿದೆ.