ಮಂಜೇಶ್ವರ: ಮತೀಯ ಉಗ್ರವಾದ ಹಾಗೂ ದೇಶದ್ರೋಹಿಗಳ ವಿರುದ್ಧ ಬಿಜೆಪಿ ಜನವರಿ 15 ಸಂಜೆ 3 ಗಂಟೆಗೆ ಕಾಸರಗೋಡು ಬಸ್ ನಿಲ್ದಾಣ ಸಮೀಪ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆ ಯಶಸ್ವಿಗೆ ಮಂಜೇಶ್ವರ ಮಂಡಲ ಬಿಜೆಪಿ ಸಮಿತಿ ತೀರ್ಮಾನಿಸಿದೆ. ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಂಡಲ ಸಮಿತಿ ಕರೆ ನೀಡಿದೆ.
ಹೊಸಂಗಡಿ ಪ್ರೇರಣ ದಲ್ಲಿ ನಡೆದ ಬಿಜೆಪಿ ಮಂಡಲ ಪದಾಧಿಕಾರಿಗಳ ಸಭೆಯಲ್ಲಿ ಆದರ್ಶ್ ಬಿಎಂ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಮಣಿಕಂಠ ರೈ ಪಟ್ಲ, ಉದ್ಘಾಟಿಸಿದರು. ಮುಖಂಡರಾದ ಅಶ್ವಿನಿ ಪಜ್ವ, ಸರೋಜ ಆರ್.ಬಲ್ಲಾಳ್, ಮಮತಾ ಕುಲಾಲ್, ತುಳಸಿ ವರ್ಕಾಡಿ, ಆಶಾಲತ ಪೇಲಪಾಡಿ, ಎ.ಕೆ.ಕಯ್ಯಾರು, ಪದ್ಮನಾಭ ಕಡಪ್ಪರ,ಕೃಷ್ಣ ಬೆಜ್ಜ, ಮುಡಿಮರ್, ಸಂತೋಷ್ ದೈಗೊಳಿ, ಯಶ್ಪಾಲ್, ರಕ್ಷಣ್ ಅಡ್ಕಲಕಟ್ಟೆ, ಆನಂದ ತಚ್ಚಿರೆ, ಪೆರ್ವೋಡಿ ಶಂಕರ ನಾರಾಯಣ ಭಟ್, ನಾರಾಯಣ ತುಂಗ, ಕೆ ವಿ ಭಟ್,ಲೋಕೇಶ್ ನೋಂಡ, ಜಯರಾಜ್ ಕುಳೂರು, ಯತೀಶ್ ಭಂಡಾರಿ ಕೌಡೂರು, ಮಹೇಶ್ ಬೆಜ್ಜ ಉಪಸ್ಥಿತರಿದ್ದರು. ಪ್ರ.ಕಾರ್ಯದರ್ಶಿ ಸುಬ್ರಮಣ್ಯ ಭಟ್ ಸ್ವಾಗತಿಸಿ, ಚಂದ್ರಹಾಸ ಪೂಜಾರಿ ವಂದಿಸಿದರು.