ಪೆರ್ಲ: ಕಾಟುಕುಕ್ಕೆ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಎನ್ನೆಸ್ಸೆಸ್ ಘಟಕದ ಸಪ್ತ ದಿನ ಶಿಬಿರಕ್ಕೆ ಚಾಲನೆ ನೀಡಲಾಯಿತು. ಎಣ್ಮಕಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸೋಮ ಶೇಖರ ಜೆ.ಎಸ್ ಶಿಬಿರ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ಜೀವನದಲ್ಲಿ ಸೇವಾ ಮನೋಭಾವವನ್ನು ರೂಢಿಸಿಕೊಳ್ಳಬೇಕು. ಇಂತಹ ಶಿಬಿರಗಳು ವಿದ್ಯಾರ್ಥಿಗಳ ಉತ್ತಮ ನಡೆತಕ್ಕೆ ಸಹಾಯಕಾರಿಯಾಗುತ್ತದೆ ಎಂದು ತಿಳಿಸಿದರು.
ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆ ಅಧ್ಯಕ್ಷ ಸಂಜೀವ ರೈ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯ ನಾರಾಯಣ ನಾಯ್ಕ, ಬ್ಲಾಕ್ ಪಂಚಾಯಿತಿ ಸದಸ್ಯ ಬಟ್ಟು ಶೆಟ್ಟಿ,ಎಣ್ಮಕಜೆ ಗ್ರಾಪಂ ಕಾರ್ಯದರ್ಶಿ ಅಚ್ಚುತ ಮಣಿಯಾಣಿ,ಶಾಲಾ ಪ್ರಬಂಧಕ ಮಿತ್ತೂರ್ ಪುರುಷೋತ್ತಮ ಭಟ್, ಪಂಚಾಯಿತಿ ಸದಸ್ಯ ಬಿ.ಎಸ್ ಗಾಂಭೀರ, ಕಾಟುಕುಕ್ಕೆ ಸುಬ್ರಾಯ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ನಾರಾಯಣ.ಕೆ, ಪಿ ಟಿ ಎ ಅಧ್ಯಕ್ಷ ರಾಮಚಂದ್ರ ಮಣಿಯಾಣಿ, ಉಪಾಧ್ಯಕ್ಷ ರಾಜಾರಾಮ ಶೆಟ್ಟಿ,ನಿವೃತ್ತ ಅಧ್ಯಾಪಕ ಲೋಕನಾಥ ಶೆಟ್ಟಿ, ನಿವೃತ್ತ ಕಛೇರಿ ಸಹಾಯಕ ರಘುರಾಮ ರೈ, ಅಧ್ಯಾಪಿಕೆ ರಮಣಿ ಎಂ ಎಸ್, ವಾಣಿ.ಕೆ ಉಪಸ್ಥಿತರಿದ್ದರು. ಪ್ರಾಂಶುಪಾಲ ಪದ್ಮನಾಭ ಶೆಟ್ಟಿ ಸ್ವಾಗತಿಸಿದರು. ರಾಜೇಶ್ ಸಿ ಎಚ್ ಕಾರ್ಯಕ್ರಮ ನಿರೂಪಿಸಿದರು. ಯೋಜನಾಧಿಕಾರಿ ಗೋವಿಂದನ್ ನಂಬೂದಿರಿ ವಂದಿಸಿದರು.