ನವದೆಹಲಿ: ಭಾರತೀಯ ಔಷಧ ನಿಯಂತ್ರಣ ಮಹಾ ನಿರ್ದೇಶನಾಲಯವು (ಡಿಸಿಜಿಐ) ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್‌ಗೆ ಗುರುವಾರ ಮಾರುಕಟ್ಟೆ ಅನುಮೋದನೆ ನೀಡಿದೆ.
ನವದೆಹಲಿ: ಭಾರತೀಯ ಔಷಧ ನಿಯಂತ್ರಣ ಮಹಾ ನಿರ್ದೇಶನಾಲಯವು (ಡಿಸಿಜಿಐ) ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್‌ಗೆ ಗುರುವಾರ ಮಾರುಕಟ್ಟೆ ಅನುಮೋದನೆ ನೀಡಿದೆ.
'ಹೊಸ ಔಷಧಗಳು ಮತ್ತು ಕ್ಲಿನಿಕಲ್ ಪ್ರಯೋಗಗಳ ನಿಯಮ-2019' ರ ಅಡಿಯಲ್ಲಿ ಎರಡೂ ಲಸಿಕೆಗಳಿಗೆ ಅನುಮೋದನೆ ಲಭಿಸಿದೆ.
ಮಾರುಕಟ್ಟೆ ಅನುಮೋದನೆಯಿಂದ ಎರಡು ಲಸಿಕೆಗಳು ಜನರಿಗೆ ನೇರವಾಗಿ ಲಭ್ಯವಾಗುವುದಿಲ್ಲ. ಅವುಗಳನ್ನು ಆಸ್ಪತ್ರೆಗಳು ಮತ್ತು ಚಿಕಿತ್ಸಾಲಯಗಳು ನೀಡಲಿವೆ ಎಂದು ಸರ್ಕಾರದ ಮೂಲಗಳು ಹೇಳಿವೆ.
ಲಸಿಕಾ ಸಂಸ್ಥೆಗಳು ನಡೆಸುತ್ತಿರುವ ಕ್ಲಿನಿಕಲ್ ಪ್ರಯೋಗಗಳ ದತ್ತಾಂಶಗಳನ್ನು ಮಹಾನಿರ್ದೇಶನಾಲಯಕ್ಕೆ ಸಲ್ಲಿಸಬೇಕು. ಕೋವಿನ್ ವೇದಿಕೆಯಲ್ಲಿ ಲಸಿಕೆ ಸರಬರಾಜನ್ನು ನಮೂದಿಸಬೇಕು, ಲಸಿಕೀಕರಣದ ನಂತರದ ಅಡ್ಡಪರಿಣಾಮಗಳ ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸಬೇಕು ಎಂಬ ಷರತ್ತಗಳನ್ನು ವಿಧಿಸಲಾಗಿದೆ.
ಕೆಲವು ಷರತ್ತುಗಳನ್ನು ವಿಧಿಸಿ, ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್‌ಗಳನ್ನು ವಯಸ್ಕರ ಬಳಕೆಗಾಗಿ ಮಾರುಕಟ್ಟೆ ಅನುಮೋದನೆ ನೀಡಬೇಕು ಎಂದು ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ ಕೋವಿಡ್ ತಜ್ಞರ ಸಮಿತಿ ಇತ್ತೀಚೆಗೆ ಶಿಫಾರಸು ಮಾಡಿತ್ತು. ಇದನ್ನು ಆಧರಿಸಿ ಡಿಸಿಜಿಐ ಮಾರುಕಟ್ಟೆ ಅನುಮೋದನೆ ನೀಡಿದೆ.