ನವದೆಹಲಿ: ಭಾರತದಲ್ಲಿ ಓಮಿಕ್ರಾನ್ ರೂಪಾಂತರಿ ಸಮುದಾಯಕ್ಕೆ ಹರಡುವ ಹಂತದಲ್ಲಿದೆ ಹಲವು ನಗರಗಳಲ್ಲಿ ಈ ರೂಪಾಂತರಿ ಪ್ರಬಲವಾಗಿದ್ದು ಘಾತೀಯವಾಗಿ ಏರುತ್ತಿದೆ ಎಂದು ಐಎನ್ಎಸ್ಎಸಿಒಜಿ (ಇನ್‌ಸಾಕೋಗ್) ಅದರ ಇತ್ತೀಚಿನ ಬುಲೆಟಿನ್ ನಲ್ಲಿ ಹೇಳಿದೆ.
ಓಮಿಕ್ರಾನ್ ನ ಉಪರೂಪಾಂತರಿ, ಬಿಎ.2 ವಂಶಾವಳಿ ದೇಶದಲ್ಲಿ ಗಣನೀಯ ಪ್ರಮಾಣದಲ್ಲಿ ಪತ್ತೆಯಾಗಿದೆ.
ಭಾನುವಾರ ಬಿಡುಗಡೆಯಾಗಿರುವ ಐಎನ್ಎಸ್ಎ ಸಿಒಜಿ ಬುಲೆಟಿನ್ ನಲ್ಲಿ, ಓಮಿಕ್ರಾನ್ ಪ್ರಕರಣಗಳಲ್ಲಿ ಬಹುತೇಕ ಪ್ರಕರಣಗಳು ರೋಗಲಕ್ಷಣ ರಹಿತ ಅಥವಾ ಸೌಮ್ಯ ಲಕ್ಷಣಗಳನ್ನು ಹೊಂದಿದ್ದು, ಆಸ್ಪತ್ರೆಗೆ ದಾಖಲಾಗುವ ಹಾಗೂ ಐಸಿಯು ಪ್ರಕರಣಗಳು ಈ ಅಲೆಯಲ್ಲಿಯೂ ಹೆಚ್ಚಾಗಿದ್ದು ಅಪಾಯದ ಮಟ್ಟ ಹಿಂದಿನಂತೆಯೇ ಇದೆ ಬದಲಾಗಿಲ್ಲ ಎಂದು ಹೇಳಿದೆ.
"ಓಮಿಕ್ರಾನ್ ಭಾರತದಲ್ಲಿ ಈಗ ಸಮುದಾಯಕ್ಕೆ ಹರಡುವ ಹಂತದಲ್ಲಿದ್ದು ಹಲವು ಮೆಟ್ರೋ ಸಿಟಿಗಳಲ್ಲಿ ಪ್ರಬಲವಾಗಿದೆ. ಎಸ್ ಜೀನ್ ಡ್ರಾಪೌಟ್ ಆಧಾರಿತ ಸ್ಕ್ರೀನಿಂಗ್ ನಲ್ಲಿ ಹೆಚ್ಚು ನಕಲಿ ನೆಗೆಟೀವ್ ಗಳು ವರದಿಯಾಗುತ್ತಿವೆ" ಎಂದು ಇನ್‌ಸಾಕೋಗ್ ವರದಿ ಹೇಳಿದೆ. ಎಸ್-ಜೀನ್ ಡ್ರಾಪ್-ಔಟ್ ಓಮಿಕ್ರಾನ್ ನಂತಹದ್ದೇ ಆದ ಜೆನೆಟಿಕ್ ರೂಪಾಂತರಿಯಾಗಿದೆ.
"ಇತ್ತೀಚಿನ ದಿನಗಳಲ್ಲಿ ವರದಿಯಾಗಿರುವ ಬಿ.1.640.2 ವಂಶಾವಳಿಯ ಮೇಲೆ ನಿಗಾ ವಹಿಸಲಾಗುತ್ತಿದೆ. ಇದು ವೇಗವಾಗಿ ಹರಡುತ್ತದೆ ಎಂಬುದಕ್ಕೆ ಸಾಕ್ಷ್ಯಗಳಿಲ್ಲ. ಹಾಗೂ ರೋಗನಿರೋಧಕತೆಯನ್ನೂ ಮೀರುವ ಅದರ ವೈಶಿಷ್ಟ್ಯಗಳು ಈ ವರೆಗೂ ಆತಂಕಕಾರಿ ರೂಪಾಂತರಿ" ಎಂದು ದೃಢಪಟ್ಟಿಲ್ಲವೆಂದು ಇನ್‌ಸಾಕೋಗ್ ಹೇಳಿದೆ.
ಭಾರತದಲ್ಲಿ ಇನ್ನು ಮುಂದೆ ಓಮಿಕ್ರಾನ್ ಸೋಂಕು ಹರಡುವಿಕೆ ಸ್ಥಳೀಯರಿಂದ ಉಂಟಾಗಲಿದೆ ಹೊರದೇಶದಿಂದ ಬಂದವರಿಂದ ಅಲ್ಲ ಎಂದು ಇನ್‌ಸಾಕೋಗ್ ಹೇಳಿದ್ದು ವೈರಾಣು ಸೋಂಕಿನ ಬದಲಾವಣೆಯಾಗುತ್ತಿರುವ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಪರಿಣಾಮಕಾರಿಯಾದ ಸೀಕ್ವೆನ್ಸಿಂಗ್ ಕಾರ್ಯತಂತ್ರದೆಡೆಗೆ ಕಾರ್ಯನಿರ್ವಹಣೆ ಮಾಡಲಾಗುತ್ತಿದೆ ಎಂದು ತಿಳಿಸಿದೆ.
ಕೋವಿಡ್-19 ತಡೆಗೆ ಪೂರಕವಾದ ನಡೆ, ಲಸಿಕೆಗಳು ಕೋವಿಡ್-19 ವೈರಾಣುವಿನ ಎಲ್ಲಾ ರೂಪಾಂತರಿಗಳಿಂದಲೂ ರಕ್ಷಣೆ ಒದಗಿಸುತ್ತದೆ ಎಂದು ಇನ್‌ಸಾಕೋಗ್ ವರದಿಯಲ್ಲಿ ತಿಳಿಸಿದೆ.