HEALTH TIPS

ಸಂತ ಮುಖ್ಯಮಂತ್ರಿ ಆಗುವಂತಿಲ್ಲ: ಸ್ವಾಮಿ ಅವಿಮುಕ್ತೇಶ್ವರಾನಂದ

             ಪ್ರಯಾಗರಾಜ್‌ಒಬ್ಬ ಸಂತ ಮುಖ್ಯಮಂತ್ರಿ ಆಗುವುದು ಸಾಧ್ಯವಿಲ್ಲ. ಸಾಂವಿಧಾನಿಕ ಹುದ್ದೆಗಾಗಿ ಜಾತ್ಯತೀತತೆಯ ಪ್ರಮಾಣವಚನ ಸ್ವೀಕರಿಸಿದ ಬಳಿಕ ವ್ಯಕ್ತಿಯು 'ಧಾರ್ಮಿಕ'ವಾಗಿ ಉಳಿಯುವುದು ಸಾಧ್ಯವಿಲ್ಲ ಎಂದು ಪ್ರಮುಖ ಸಂತರಲ್ಲಿ ಒಬ್ಬರಾದ ಸ್ವಾಮಿ ಅವಿಮುಕ್ತೇಶ್ವರಾನಂದ ಅವರು ಹೇಳಿದ್ದಾರೆ.

            ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಉಲ್ಲೇಖಿಸಿ ಅವರು ಹೀಗೆ ಹೇಳಿದ್ದಾರೆ.

               ಗೋರಖಪುರದ ಗೋರಖನಾಥ ದೇವಾಲಯದ ಮಹಾಂತ ಮತ್ತು ಸಂತ ಆಗಿ ಯೋಗಿ ಆದಿತ್ಯನಾಥ ಅವರ ಸ್ಥಾನ ಏನು ಎಂಬ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದ್ದಾರೆ. 'ಯಾವುದೇ ವ್ಯಕ್ತಿಯು ಎರಡು ಪ್ರಮಾಣಕ್ಕೆ ಬದ್ಧವಾಗಿರಲು ಸಾಧ್ಯವಿಲ್ಲ. ಸಂತನೊಬ್ಬ ಮಹಾಂತ ಆಗಿರಬಹುದು, ಆದರೆ ಮುಖ್ಯಮಂತ್ರಿ ಅಥವಾ ಪ್ರಧಾನಿ ಆಗುವುದು ಸಾಧ್ಯವಿಲ್ಲ' ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇಸ್ಲಾಂನ ಖಲೀಫಾ ವ್ಯವಸ್ಥೆಯಲ್ಲಿ ಇದು ಸಾಧ್ಯ. ಅವರಲ್ಲಿ ಧಾರ್ಮಿಕ ಮುಖ್ಯಸ್ಥನು ರಾಜ್ಯದ ದೊರೆಯೂ ಆಗಿರುತ್ತಾನೆ ಎಂದು ಅವರು ವಿವರಿಸಿದ್ದಾರೆ. ಗಂಗಾ ತಟದಲ್ಲಿ ನಡೆ ಮಾಘ ಉತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

            'ಈ ಭಾರಿ ಮಾಘ ಉತ್ಸವವನ್ನು ನಿರ್ಲಕ್ಷಿಸಲಾಗಿದೆ. ಕೆಲವು ಸಂತರು ಸತ್ಯಾಗ್ರಹ ಮತ್ತು ಆತ್ಮಾಹುತಿಯಂತಹ ಬೆದರಿಕೆಯನ್ನೂ ಒಡ್ಡಿದ್ದಾರೆ. ರಾಜಕೀಯ ನಾಯಕರು ಚುನಾವಣೆಯ ಕೆಲಸದಲ್ಲಿ ಮುಳುಗಿದ್ದರೆ, ಅಧಿಕಾರಿಗಳು ಸರಿಯಾದ ವ್ಯವಸ್ಥೆ ಮಾಡಲು ಸಾಧ್ಯವಿಲ್ಲವೇ' ಎಂದು ಅವಿಮುಕ್ತೇಶ್ವರಾನಂದ ಪ್ರಶ್ನಿಸಿದ್ದಾರೆ.

           ಎಲ್ಲ ರಾಜಕೀಯ ಪಕ್ಷಗಳು ಧಾರ್ಮಿಕ ವಿಚಾರದಲ್ಲಿ ಹಸ್ತಕ್ಷೇಪ ನಡೆಸುತ್ತಿವೆ. ಸಂತರ ಜತೆ ಸಂಪರ್ಕಕ್ಕೆ ಇದು ಸೀಮಿತವಾಗಿಲ್ಲ. ಧಾರ್ಮಿಕ ಹುದ್ದೆಗಳಲ್ಲಿ ಕೂಡ ತಮ್ಮವರನ್ನೇ ತಂದು ಕೂರಿಸಿ, ತಮ್ಮ ನಿಲುವುಗಳನ್ನು ಹರಡುವ ಯತ್ನ ನಡೆಯುತ್ತಿದೆ. ಧಾರ್ಮಿಕ ಗುರುಗಳು ಕೂಡ ತಮ್ಮದೇ ಭಾಷೆಯಲ್ಲಿ ಮಾತನಾಡಬೇಕು ಎಂದು ಕೆಲವು ವ್ಯಕ್ತಿಗಳು ಬಯಸುತ್ತಿದ್ದಾರೆ. ಹಾಗಾಗಿಯೇ, ಹಳೆಯ
ಮಾದರಿಯಲ್ಲಿ ಧರ್ಮ ಪ್ರಸಾರ ಮಾಡುವವರನ್ನು ಕಂಡರೆ ಅವರಿಗೆ ಆಗುತ್ತಿಲ್ಲ. ಅಂತಹ ಧಾರ್ಮಿಕ ಗುರುಗಳನ್ನು ನಿವಾರಿಸುವ ಪ್ರಯತ್ನವೂ ನಡೆಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries