ಕುಂಬಳೆ: ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು ಕರ್ನಾಟಕ (ಉತ್ತರ) ಕಾಸರಗೋಡು ಜಿಲ್ಲೆ ಇದರ ವತಿಯಿಂದ ಒಡಿಯೂರು ಶ್ರೀಗಳವರ ಷಷ್ಠ್ಯಬ್ದ ಸಂಭ್ರಮಾಚರಣೆಯ ಪ್ರಯುಕ್ತ ಇತ್ತಿಚೆಗೆ ಶಿರಿಯ ಶ್ರೀ ಸತ್ಯಸಾಯಿ ಗ್ರಾಮ ಸೇವಾ ಕೇಂದ್ರದಲ್ಲಿ ಶ್ರೀ ಗುರು ಪಾದುಕಾ ಪೂಜೆ, ಶ್ರೀ ಗುರುವಂದನೆ, ಶ್ರೀ ಹನುಮಾನ್ ಚಾಲೀಸಾ ಪಠಣ, ಹಿರಿಯ ಸಾಧಕರಿಗೆ ಸನ್ಮಾನ ಹಾಗೂ ಹಿರಿಯ 60 ಮಹಿಳೆಯರಿಗೆ ಸೀರೆ ವಿತರಣಾ ಕಾರ್ಯಕ್ರಮವು ಕೋವಿಡ್ ಮಾನದಂಡಗಳನ್ನು ಪಾಲಿಸಿಕೊಂಡು ಜರಗಿತು.
ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು ಕಾಸರಗೋಡು ಜಿಲ್ಲಾಧ್ಯಕ್ಷ ಹಿರಣ್ಯ ಮಹಾಲಿಂಗ ಭಟ್ ಪ್ರಶಾಂತಿ ಧ್ವಜಾರೋಹಣಗೈಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಒಡಿಯೂರು ಸಂಸ್ಥಾನದ ಪರಮಪೂಜ್ಯ ಶ್ರೀಗುರುದೇವಾನಂದ ಸ್ವಾಮೀಜಿ ಹಾಗೂ ಪರಮಪೂಜ್ಯ ಮಾತಾನಂದಮಯಿ ಇವರಿಗೆ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು ಕಾಸರಗೋಡು ಇವರ ವತಿಯಿಂದ ಗುರುವಂದನಾ ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು ಕರ್ನಾಟಕ ಇದರ ರಾಜ್ಯ ಶೈಕ್ಷಣಿಕ ಸಂಯೋಜಕ ಜಗನ್ನಾಥ ನಾಡಿಗೇರ್ ದಾವಣಗೆರೆ, ಷಷ್ಟ್ಯಬ್ಧ ಸಮಿತಿ ಮಂಗಲ್ಪಾಡಿ ಮಾತೃ ಸಮಿತಿ ಅಧ್ಯಕ್ಷೆ ಮೀರಾ ಆಳ್ವ ಉಪಸ್ಥಿತರಿದ್ದರು.
ಈ ಸಂದಭರ್Àದಲ್ಲಿ ಪ್ರಗತಿಪರ ಕೃಷಿಕ ಆನಂದ ಶೆಟ್ಟಿ ವಾನಂದೆ, ಪ್ರಗತಿಪರ ಕೃಷಿಕರು, ಪರಂಪರಾಗತ ನಾಟಿ ವೈದ್ಯ ಶಾಂತರಾಮ್ ಶೆಟ್ಟಿ ಅಡ್ಕ ಹೊಸಮನೆ, ಹಿರಿಯ ಸ್ವಾಮಿ ಭಕ್ತೆ ರಾಧಮ್ಮ ಶಿರಿಯಾ ಇವರ ಸಾಧನೆಯನ್ನು ಗುರುತಿಸಿ ಸಮಾರಂಭದಲ್ಲಿ ಗೌರವಿಸಲಾಯಿತು. ಇದೇ ಸಂದಭರ್Àದಲ್ಲಿ 60 ಮಂದಿ ಅರ್ಹ ಹಿರಿಯ ಮಹಿಳೆಯರಿಗೆ ಉಚಿತ ಸೀರೆಗಳನ್ನು ಒಡಿಯೂರು ಶ್ರೀಗಳು ತಮ್ಮ ದಿವ್ಯ ಹಸ್ತದಿಂದ ವಿತರಿಸಿದರು.
ಶಿರಿಯ ಸಾಯಿ ಸಮಿತಿಯ ಮಾಜಿ ಸಂಚಾಲಕ ಮಲಾರ್ ಜಯರಾಮ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ರೇಣುಕಾ ಎಸ್ ರೈ ಮತ್ತು ಸಾಯೀಶ್ವರಿ ಡಿ ಶೆಟ್ಟಿ ಪ್ರಾರ್ಥನೆ ಹಾಡಿದರು. ಕೃಷ್ಣ ಪ್ರಸಾದ್ ಕಾಟುಕುಕ್ಕೆ ಸ್ವಾಗತಿಸಿ, ಲಲಿತ್ ಕುಮಾರ್ ಶಿರಿಯಾ ವಂದಿಸಿದರು. ಸತ್ಯಸಾಯಿ ಸೇವಾ ಸಂಸ್ಥೆಗಳು ಕಾಸರಗೋಡು ಜಿಲ್ಲಾ ಉಪಾಧ್ಯಕ್ಷ ರಾಮಚಂದ್ರ ಚೆರುಗೋಳಿ ಕಾರ್ಯಕ್ರಮ ನಿರ್ವಹಿಸಿದರು.