ಕೊಚ್ಚಿ: ಫಿರೋಜ್ ಕುನ್ನುಂಪರಂಬಿಲ್ ನ ಬಲವಂತದ ಮತಾಂತರದ ವಿರುದ್ಧ ದೂರಿನೊಂದಿಗೆ ಹಿಂದೂ ಐಕ್ಯ ವೇದಿಕೆ. ಮುಂದೆಬಂದಿದೆ ಮತಾಂತರ ಹರಡಲು ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಹಿಂದೂ ಐಕ್ಯ ವೇದಿಕೆ ಆರೋಪಿಸಿದೆ. ಸೇವೆಯ ನೆಪದಲ್ಲಿ ಫಿರೋಜ್ ಕುನ್ನುಂಪರಂಬಿಲ್ ಮತ್ತು ಆತನ ಸಂಗಡಿಗರು ವ್ಯಾಪಕವಾಗಿ ಮತಾಂತರ ಮಾಡುತ್ತಿದ್ದಾರೆ ಎಮದು ಆರೋಪಿಸಲಾಗಿದೆ.
ಬಡ ಹಿಂದೂ ಕುಟುಂಬಗಳಿಗೆ ನಿವೇಶನ, ಮನೆ ನೀಡಿ ಮತಾಂತರ ಮಾಡಲಾಗುತ್ತಿದೆ. ಇದರ ವಿರುದ್ಧ ಹಿಂದೂ ಐಕ್ಯವೇದಿ ದೂರಿನೊಂದಿಗೆ ರಂಗಕ್ಕೆ ಬಂದಿದೆ. ಹಿಂದೂ ಐಕ್ಯ ವೇದಿಕೆಯ ರಾಜ್ಯ ಕಾರ್ಯದರ್ಶಿ ಪಿ.ವಿ.ಮುರಳೀಧರನ್ ಮಾತನಾಡಿ, ಕೇರಳದಲ್ಲಿ ಮತಾಂತರ ಪ್ರಕ್ರಿಯೆ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಫಿರೋಜ್ ಕುನ್ನುಂಪರಂಬಿಲ್ ವಿರುದ್ದ ಪ್ರತಿಭಟನೆ, ಹೋರಾಟ ನಡೆಸಲಾಗುವುದೆಮದು ಹೇಳಿದ್ದಾರೆ.
ವಿವಾಹಿತ ಮುಸ್ಲಿಂ ಯುವಕರು ಮದುವೆಯಾಗಿಲ್ಲ ಎಂದು ಸುಳ್ಳು ಹೇಳಿ ಹಿಂದೂ ಹುಡುಗಿಯರನ್ನು ವಿವಾಹವಾಗುತ್ತಾರೆ. ಅನೇಕ ಹುಡುಗಿಯರು ಈ ರೀತಿಯಲ್ಲಿ ಮತಾಂತರವನ್ನು ಮುಂದುವರೆಸುತ್ತಾರೆ. ದೂರಿನ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ಆಂದೋಲನ ಆರಂಭಿಸುವುದಾಗಿ ಹಿಂದೂ ಐಕ್ಯ ವೇದಿಕೆ ತಿಳಿಸಿದೆ.