ನವದೆಹಲಿ: ಕ್ಯಾಬಿನೆಟ್ ನೇಮಕಾತಿ ಸಮಿತಿ(ಎಸಿಸಿ)ಯಿಂದ ಶುಕ್ರವಾರ ಅನುಮೋದನೆ ಪಡೆದ ನಂತರ ತಕ್ಷಣವೇ ಜಾರಿಗೆ ಬರುವಂತೆ ರೈಲ್ವೆ ಸಚಿವಾಲಯವು ವಿನಯ್ ಕುಮಾರ್ ತ್ರಿಪಾಠಿ ಅವರನ್ನು ರೈಲ್ವೆ ಮಂಡಳಿಯ ಹೊಸ ಅಧ್ಯಕ್ಷ ಹಾಗೂ ಸಿಇಒ ಆಗಿ ನೇಮಕ ಮಾಡಿದೆ.
ವಿನಯ್ ಕುಮಾರ್ ತ್ರಿಪಾಠಿ, ರೈಲ್ವೆ ಮಂಡಳಿಯ ಹೊಸ ಅಧ್ಯಕ್ಷರಾಗಿ ನೇಮಕಗೊಳ್ಳುವ ಮೊದಲು ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಈಶಾನ್ಯ ರೈಲ್ವೆಯ ಜನರಲ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಕ್ಯಾಬಿನೆಟ್ ನೇಮಕಾತಿ ಸಮಿತಿಯು ಜನವರಿ 1 ರಿಂದ ಆರು ತಿಂಗಳವರೆಗೆ ತ್ರಿಪಾಠಿ ಅವರ ನೇಮಕಾತಿಯನ್ನು ಅನುಮೋದಿಸಿದೆ ಮತ್ತು ಅವರ ಅಧಿಕಾರಾವಧಿಯನ್ನು 2022 ರ ಡಿಸೆಂಬರ್ 31 ರವರೆಗೆ ವಿಸ್ತರಿಸಿದೆ.
ಸಚಿವಾಲಯವು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಹಂಚಿಕೊಂಡ ವಿವರಗಳ ಪ್ರಕಾರ, ತ್ರಿಪಾಠಿ ಅವರು ಐಐಟಿ-ರೂರ್ಕಿಯಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವೀಧರರಾಗಿದ್ದಾರೆ ಮತ್ತು ಇಂಡಿಯನ್ ರೈಲ್ವೇ ಸರ್ವಿಸ್ ಆಫ್ ಎಲೆಕ್ಟ್ರಿಕಲ್ ಇಂಜಿನಿಯರ್ಸ್(IRSEE) 1998-ಬ್ಯಾಚ್ ನ ಅಧಿಕಾರಿಯಾಗಿದ್ದಾರೆ.