ಕೊಚ್ಚಿ: ಕೇರಳ ಸಂದರ್ಶನಕ್ಕೆ ಎರಡು ಬಾರಿ ಆಗಮಿಸಿದ್ದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹಾಗೂ ಅವರ ಪತ್ನಿ ಉಷಾ ಅವರು ಕೇರಳದ ಪ್ರಸಿದ್ದ ಆಹಾರ ಪುಟ್ಟು ತಯಾರಿಸುವ ವಸ್ತುವಿನೊಂದಿಗೆ ದೆಹಲಿಗೆ ವಾಪಸಾಗಿದ್ದಾರೆ. ಪುಟ್ಟುವಿನ ಮೇಲಿನ ಒಲವಿನಿಂದ ಪುಟ್ಟು ತಯಾರಿಸುವ ವಸ್ತು ಸಂಘಟಿಸುವಂತೆ ಉಪರಾಷ್ಟ್ರಪತಿಗಳು ಸೂಚಿಸಿದರು. ಎರಡು ದಿನಗಳ ಕಾಲ ಎರ್ನಾಕುಳಂನ ಅತಿಥಿ ಗೃಹದಲ್ಲಿ ತಂಗಿದ್ದ ವೇಳೆ ಪುಟ್ಟು ಉಪರಾಷ್ಟ್ರಪತಿ ಮತ್ತು ಅವರ ಪತ್ನಿಯ ನೆಚ್ಚಿನ ಆಹಾರವಾಗಿತ್ತು.
ಇದರೊಂದಿಗೆ ಉಪರಾಷ್ಟ್ರಪತಿಗಳ ಪತ್ನಿ ಉಷಾ ಅವರು ಅಡುಗೆ ಮಾಡುವವರನ್ನು ಪುಟ್ಟು ಮಾಡುವುದು ಹೇಗೆ ಎಂದು ಪ್ರಶ್ನಿಸಿದರು. ಆ ಬಳಿಕ ಅವರು ಪುಟ್ಟು ತಯಾರುಗೊಳಿಸುವ ಸ್ಟೀಲ್ ನ ಮಣೆ(ಪುಟ್ಟು ತಯಾರಿಸುವ ಒಂದು ಸಾಧನ) ಬೇಕೆಂದು ಒತ್ತಾಯಿಸಿದರು. ತಕ್ಷಣ ಸಿಬ್ಬಂದಿ ಅದನ್ನು ಒದಗಿಸಿದರು. ಇದಕ್ಕಾಗಿ ಉಪರಾಷ್ಟ್ರಪತಿಗಳು ಅದರ ವೆಚ್ಚವನ್ನೂ ನೀಡಿದರು. ಪುಟ್ಟಿನ ಹೊರತಾಗಿ, ಕೇರಳ ಶೈಲಿಯ ಬಾಳೆಎಲೆ ಊಟ, ಕರಿದ ಬಾಳೆಕಾಯಿ ಚಿಪ್ಸ್ ಮತ್ತು ಕರಿಮೀನು ಸುಟ್ಟು ತಯಾರಿಸಿದ ಆಹಾರವನ್ನೂ ಸಹ ಮೆಚ್ಚಿಕೊಂಡರೆಂದು ತಿಳಿದುಬಂದಿದೆ.