ತಿರುವನಂತಪುರ: ತಿರುವನಂತಪುರಂನ ಪಟ್ಟಂ ಎಂಬಲ್ಲಿ ನಿಗೂಢವಾಗಿ ವಾಹನವೊಂದು ಪತ್ತೆಯಾಗಿದೆ. ಈ ವಾಹನದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬರೆದಿರುವ ಪದಗಳು ಪತ್ತೆಯಾಗಿವೆ. ಉತ್ತರ ಪ್ರದೇಶದ ನೋಂದಣಿ ಹೊಂದಿರುವ ಪಂಜಾಬ್ ಮೂಲದ ಓಂಕಾರ್ ಎಂಬಾತನ ಮಾಲೀಕತ್ವದ ವಾಹನವನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ.
ಹೆಚ್ಚಿನ ತನಿಖೆಗಾಗಿ ವಾಹನವನ್ನು ಪೆÇಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದು, ವಾಹನದ ಮಾಲೀಕರು ಪತ್ತೆಯಾಗಿಲ್ಲ. ನಿನ್ನೆ ಮಧ್ಯಾಹ್ನ ಪಟ್ಟಂ ರಾಯಲ್ ಕ್ಲಬ್ ಎದುರು ವಾಹನವನ್ನು ಬಿಟ್ಟು ಹೋಗಿರುವುದು ಪತ್ತೆಯಾಗಿದೆ. ಘಟನೆ ಕುರಿತು ಪೋಲೀಸರು ತನಿಖೆ ಆರಂಭಿಸಿದ್ದಾರೆ.
ವಾಹನದಲ್ಲಿ ನಾಲ್ಕು ಬ್ಯಾಗ್‍ಗಳು ಹಾಗೂ ಹಳೆಯ ಬಟ್ಟೆಗಳು ಪತ್ತೆಯಾಗಿವೆ. ರಾಯಲ್ ಕ್ಲಬ್ ನಿಂದ ಪಾನಮತ್ತರಾಗಿ ಅಲ್ಲಿ ಗಲಾಟೆ ಮಾಡಿ ವಾಹನ ಬಿಟ್ಟು ತೆರಳಿದ್ದಾರೆ ಎಂದು ತಿಳಿದು ಬಂದಿದೆ. ಈ ಕಾರಿನಲ್ಲಿ ಕೃಷಿ ಕಾನೂನನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದವರ ಪರ ಘೋಷಣೆಗಳನ್ನು ಹಾಕಲಾಗಿತ್ತು.