ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತು ಕುಟುಂಬಶ್ರೀ ಸಿಡಿಎಸ್ ಸಮಿತಿಗೆ ಆಯ್ಕೆಯಾದ ನೂತನ ಪದಾಧಿಕಾರಿಗಳ ಪ್ರತಿಜ್ಞಾ ಕಾರ್ಯಕ್ರಮ ಪಂಚಾಯತಿ ಸಭಾಂಗಣದಲ್ಲಿ ಜರಗಿತು.
ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ಜಲಜಾಕ್ಷಿ ಅವರಿಗೆ ರಿಟನಿರ್ಂಗ್ ಆಫೀಸರ್ ಸಜು.ಕೆ ಸತ್ಯ ಪ್ರತಿಜ್ಞೆ ಬೋಧಿಸಿದರು. ಬಳಿಕ ಜಲಜಾಕ್ಷಿ ಅವರು ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಶಶಿಕಲಾ ಸ್ವರ್ಗ ಅವರಿಗೂ ಬಳಿಕ 17 ವಾರ್ಡ್ ನ್ನು ಪ್ರತಿನಿಧೀಕರಿಸುತ್ತಿರುವ ಸಿಡಿಎಸ್ ಸದಸ್ಯರಿಗೂ ಸತ್ಯ ಪ್ರತಿಜ್ಞೆ ಬೋಧಿಸಿದರು.
ಪದಗ್ರಹಣ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸಿಡಿಎಸ್ ಅಧ್ಯಕ್ಷೆ ಶಾರದ ವಹಿಸಿದ್ದರು. ಎಣ್ಮಕಜೆ ಗ್ರಾಮ ಪಂಚಾಯತು ಅಧ್ಯಕ್ಷ ಸೋಮಶೇಖರ ಜೆ.ಎಸ್.ಉದ್ಘಾಟಿಸಿದರು. ಗ್ರಾ.ಪಂ.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್. ಗಾಂಭೀರ್, ಕ್ಷೇಮಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸೌಧಾಬಿ ಹನೀಫ್, ವಾರ್ಡ್ ಸದಸ್ಯರಾದ ಮಹೇಶ್ ಭಟ್, ರಾಮಚಂದ್ರ ಎಂ, ನರಸಿಂಹ ಪೂಜಾರಿ,ಮಾಜಿ ಉಪಾಧ್ಯಕ್ಷೆ ಆಯಿಷಾ ಎ.ಎ. ಮೊದಲಾದವರು ಭಾಗವಹಿಸಿದ್ದರು.