ನವದೆಹಲಿ: ಚೀನಾದ ಡ್ರ್ಯಾಗನ್ ಸೇನೆ ಅರುಣಾಚಲ ಪ್ರದೇಶದ ಯುವಕನನ್ನು ಅಪಹರಣ ಮಾಡಿದೆ ಎಂದು ಅರುಣಾಚಲ ಪ್ರದೇಶದ ಸಂಸದ ತಪಿರ್ ಗಾವೊ ಗಂಭೀರ ಆರೋಪ ಮಾಡಿದ್ದಾರೆ.
ಅರುಣಾಚಲ ಪ್ರದೇಶದ ಮೇಲಿನ ಸಿಯಾಂಗ್ ಜಿಲ್ಲೆಯಲ್ಲಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) 17 ವರ್ಷದ ಅಪ್ರಾಪ್ತನನ್ನು ಭಾರತದ ಭೂಪ್ರದೇಶದಿಂದ ಅಪಹರಿಸಿದೆ ಎಂದು ರಾಜ್ಯದ ಸಂಸದ ತಪಿರ್ ಗಾವೊ ಬುಧವಾರ ಹೇಳಿದ್ದಾರೆ. ಮಿರಾಮ್ ಟ್ಯಾರೋನ್ ಎಂದು ಗುರುತಿಸಲಾದ ಹದಿಹರೆಯದ ಯುವಕನನ್ನು ಪಿಎಲ್‌ಎ ಮಂಗಳವಾರ ಲುಂಗ್ಟಾ ಜೋರ್ ಪ್ರದೇಶದಿಂದ ಅಪಹರಿಸಿದೆ ಎಂದು ಗಾವೊ ಆರೋಪಿಸಿದ್ದಾರೆ.
ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದ ಟ್ಯಾರೋನ್‌ನ ಸ್ನೇಹಿತ ಜಾನಿ ಯಾಯಿಂಗ್, ಪಿಎಲ್‌ಎಯಿಂದ ಅಪಹರಣದ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಲೋವರ್ ಸುಬನ್ಸಿರಿ ಜಿಲ್ಲೆಯ ಜಿಲ್ಲಾ ಕೇಂದ್ರವಾದ ಝಿರೋದಿಂದ ಫೋನ್ ಮೂಲಕ ಮಾಹಿತಿ ತಿಳಿಸಿದರು ಎಂದು ಹೇಳಿದ್ದಾರೆ,.
ಇಬ್ಬರೂ ಜಿಡೋ ಗ್ರಾಮದ ಸ್ಥಳೀಯ ಬೇಟೆಗಾರರು. ಅರುಣಾಚಲ ಪ್ರದೇಶದಲ್ಲಿ ತ್ಸಾಂಗ್ಪೋ ನದಿ ಭಾರತವನ್ನು ಪ್ರವೇಶಿಸುವ ಸಮೀಪದಲ್ಲಿ ಈ ಘಟನೆ ನಡೆದಿದೆ ಎಂದು ಸಂಸದರು ತಿಳಿಸಿದ್ದಾರೆ. ತ್ಸಾಂಗ್ಪೋ ನದಿಯನ್ನು ಅರುಣಾಚಲ ಪ್ರದೇಶದಲ್ಲಿ ಸಿಯಾಂಗ್ ಮತ್ತು ಅಸ್ಸಾಂನಲ್ಲಿ ಬ್ರಹ್ಮಪುತ್ರ ಎಂದು ಕರೆಯಲಾಗುತ್ತದೆ.
ಈ ಕುರಿತು ಟ್ವೀಟ್ ಕೂಡ ಮಾಡಿರುವ ಸಂಸದ ಗಾವೋ, "ಚೀನೀ PLA ಅವರು 17 ವರ್ಷಗಳ ಜಿಡೋ ವಿಲ್‌ನ ಶ್ ಮಿರಾಮ್ ಟ್ಯಾರೋನ್ ಅವರನ್ನು ಅಪಹರಿಸಿದ್ದಾರೆ. ಭಾರತ ಸರ್ಕಾರದ ಎಲ್ಲಾ ಏಜೆನ್ಸಿಗಳು ಆತನನ್ನು ಶೀಘ್ರ ಬಿಡುಗಡೆ ಮಾಡಲು ಮುಂದಾಗುವಂತೆ ವಿನಂತಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.