ಬದಿಯಡ್ಕ: ಬಾರಿಕ್ಕಾಡು ಶ್ರೀಮಹಾವಿಷ್ಣು ಕ್ಷೇತ್ರದ ವಾರ್ಷಿಕ ಉತ್ಸವ ಇಂದು ಹಾಗೂ ನಾಳೆ ನಡೆಯಲಿದೆ.
ಇಂದು ಬೆಳಿಗ್ಗೆ 8ಕ್ಕೆ ಗಣಪತಿ ಹವನ, ಉಷಃಪೂಜೆ, ಪಂಚಗವ್ಯ, ನವಕಾಭಿಷೇಕ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ಭೋಜನ ನಡೆಯಲಿದೆ. ಸಂಜೆ 7ಕ್ಕೆ ವಿಷ್ಣುಮೂರ್ತಿ ದೈವದ ಭಂಡಾರ ಹೊರಡುವುದು, ರಾತ್ರಿ 8ಕ್ಕೆ ಮºಪೂಜೆ, ರಾತ್ರಿ 9ಕ್ಕೆ ದೇವರ ಉತ್ಸವ ಬಲಿ, ರಾಜಾಂಗಣ ಪ್ರಸಾದ, ಅನ್ನದಾನ ನಡೆಯಲಿದೆ. ನಾಳೆ(ಜ.18) ಬೆಳಿಗ್ಗೆ 9ಕ್ಕೆ ವಿಷ್ಣುಮೂರ್ತಿ ದೈವದ ಕೋಲ, ಪ್ರಸಾದ ವಿತರಣೆ ನಡೆಯಲಿದೆ.