ಷಿಯಾನ್: ಚೀನಾದಲ್ಲಿ ಕೋವಿಡ್ ನಿಯಮಾವಳಿಗಳು ಜಾರಿಯಲ್ಲಿದ್ದರೂ ಅತಿ ಹೆಚ್ಚು ಕೊರೋನಾ ಪ್ರಕರಣಗಳು ದಾಖಲಾಗುತ್ತಿವೆ.
2019 ರಲ್ಲಿ ಕೊರೋನವೈರಸ್ ಸಾಂಕ್ರಾಮಿಕ ಪ್ರಾರಂಭವಾದ ನಂತರದ ದಿನಗಳಲ್ಲಿ ಒಂದು ವಾರದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದೆ. ಷಿಯಾನ್ ನಗರದಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗಿದ್ದು ಈ ಭಾಗದಲ್ಲಿ 10 ದಿನಗಳ ವರೆಗೆ ಲಾಕ್ ಡೌನ್ ಹೇರಲಾಗಿತ್ತು.
ಷಿಯಾನ್ ನಗರದಲ್ಲಿ ಪ್ರಕರಣ ಹೆಚ್ಚಾಗಲು ಪಾಕಿಸ್ತಾನ ಕಾರಣ!
ಷಿಯಾನ್ ನಲ್ಲಿ ಕೊರೋನಾ ಪ್ರಕರಣಗಳ ಹೆಚ್ಚಳದ ಹಿಂದಿನ ಕಾರಣವೆಂದರೆ ಪಾಕಿಸ್ತಾನ! ಹೌದು ಅಚ್ಚರಿಯಾದರೂ ಸತ್ಯ! ಪಾಕಿಸ್ತಾನದಿಂದ ಆಗಮಿಸಿದ ಪ್ರಯಾಣಿಕ ವಿಮಾನವೊಂದರಿಂದ ಷಿಯಾನ್ ನಲ್ಲಿ ಮೊದಲ ಕೋವಿಡ್-19 ಪ್ರಕರಣ ವರದಿಯಾಗುವುದಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದ್ದು ಪಾಕಿಸ್ತಾನದಿಂದ ಬಂದ ವಿಮಾನದಲ್ಲಿದ್ದ ಮಂದಿಯಿಂದಲೇ ಕೋವಿಡ್-19 ಸೋಂಕು ಸ್ಥಳೀಯವಾಗಿ ಹರಡುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಷಿಯಾನ್ ನಗರದಲ್ಲಿನ ಕೋವಿಡ್-19 ಪ್ರಕರಣಗಳ ಏರಿಕೆ ದೇಶಾದ್ಯಂತ ಹರಡುವ ಆತಂಕ ಉಂಟುಮಾಡಿದ್ದು, ವಿಶ್ವವಿದ್ಯಾನಿಲಯದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಕ್ಯಾಂಪಸ್‌ನಿಂದ ಹೊರಗೆ ಹೋಗದಂತೆ ಚೀನಾದಲ್ಲಿ ಸೂಚನೆ ನೀಡಲಾಗಿದೆ. ಇದಲ್ಲದೆ ಜನರ ವಾಹನ ಚಾಲನೆಯನ್ನೂ ಸಹ ನಿಷೇಧ ಮಾಡಲಾಗಿದ್ದು, ಕಟ್ಟುನಿಟ್ಟಿನ ಕ್ರಮಗಳನ್ನ ಚೀನಾದಲ್ಲಿ ಕೈಗೊಳ್ಳಲಾಗುತ್ತಿದೆ.