ನವದೆಹಲಿ : ನಿಗದಿತ ಕಾಲಮಿತಿಯ ಗುರಿಗಳೊಂದಿಗೆ ಕೆಲಸಗಳನ್ನು ಪೂರ್ತಿಗೊಳಿವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ದೇಶಾದ್ಯಂತದ ವಿವಿಧ ಜಿಲ್ಲಾ ಮ್ಯಾಜಿಸ್ಟ್ರೇಟರುಗಳಿಗೆ ಕರೆ ನೀಡಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾ ಮ್ಯಾಜಿಸ್ಟ್ರೇಟರುಗಳ ಜೊತೆ ಸಂವಾದ ನಡೆಸಿದ ಪ್ರಧಾನಿ ''ನಾವು ಪ್ರತಿಯೊಂದು ಜಿಲ್ಲೆಯ ಸೇವಾ ಹಾಗೂ ಸೌಕರ್ಯಗಳ ನಡುವೆ ಶೇ.100 ಶೇಕಡರಷ್ಟು ಪರಿಪೂರ್ಣತೆಯನ್ನು ತಲುಪಬೇಕಾಗಿದೆ.
ಮುಂದಿನ ಎರಡು ವರ್ಷಗಳಲ್ಲಿ ಪೂರ್ಣಗೊಳ್ಳಬಹುದಾದಂತಹ ಕಿರುನೋಟಗಳ ಮಾರ್ಗನಕ್ಷೆನ್ನು ಸೃಷ್ಟಿಸಬೇಕಾಗಿದೆ ಎಂದು ಪ್ರಧಾನಿ ತಿಳಿಸಿದರು.
ಜನರ ಜೀವನವನ್ನು ಸುಗಮಗೊಳಿಸುವಂತಹ ಹತ್ತು ಕಾರ್ಯಯೋಜನೆಗಳನ್ನು ಮುಂದಿನ ಮೂರು ವರ್ಷಗಳಲ್ಲಿ ಪೂರ್ಣಗೊಳಿಸುವಂತೆ ಅವರು ಜಿಲ್ಲಾ ಮ್ಯಾಜಿಸ್ಟ್ರೇಟರುಗಳನ್ನು ಕೋರಿದ್ದಾರೆ. ''ಇಂತಹ ಐದು ಕೆಲಸಗಳನ್ನು ಅಝಾದಿ ಕಾ ಅಮೃತ ಮಹೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾದ ಯೋಜನೆಗಳ ಜೊತೆ ಸಮ್ಮಿಳಿತಗೊಳಿಸುವಂತೆಯೂ ಅವರು ಜಿಲ್ಲಾ ಮ್ಯಾಜಿಸ್ಟ್ರೇಟರುಗಳಿಗೆ ಕರೆ ನೀಡಿದ್ದಾರೆ.
'ಒಂದೇ ಜಿಲ್ಲೆ, ಒದು ಉತ್ಪನ್ನ'ವು ಸಂಭಾವ್ಯ ಜಿಲ್ಲೆಗಳನ್ನು ಆಧರಿಸಿದೆ ಎಂದು ಪಿಎಂ ಗಮನಸೆಳೆದರು. ನಿಮ್ಮ ಜಿಲ್ಲೆಗೆ ರಾಷ್ಟ್ರೀಯ ಹಾಗೂ ಜಾಗತಿಕ ವರ್ಚಸ್ಸನ್ನು ನೀಡುವಂತಹ ಮಿಶನ್ ಇದಾಗಬೇಕೆಂದು ಅವರು ಹೇಳಿದರು.
ತಮ್ಮ ತಮ್ಮ ಕಾರ್ಯವ್ಯಾಪ್ತಿಯ ಜಿಲ್ಲೆಗಳಲ್ಲಿ ' ವೋಕಲ್ ಫಾರ್ ಲೋಕಲ್' ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವಂತೆ ಪ್ರಧಾನಿಯವರು ಜಿಲ್ಲಾ ಮ್ಯಾಜಿಸ್ಟ್ರೇಟರುಗಳನ್ನು ಆಗ್ರಹಿಸಿದರು.
ಈ ಆಕಾಂಕ್ಷಿ ಜಿಲ್ಲೆಗಳ ಪ್ರತಿಯೊಂದು ಮೂಲೆ ಮೂಲೆಗಳನ್ನು ತಲುಪಬಲ್ಲಂತಹ ಡಿಜಿಟಲ್ ಮೂಲಸೌಕರ್ಯಗಳ ಪ್ರಗತಿಯಲ್ಲಿ ವೌನ ಕ್ರಾಂತಿಯನ್ನು ಭಾರತ ಸಾಧಿಸುತ್ತಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.
''ಒಂದು ಅಥವಾ ಎರಡು ಮಾನದಂಡಗಳಲ್ಲಿ ಹಿಂದಿರುವ 22 ರಾಜ್ಯಗಳ 142 ಜಿಲ್ಲೆಗಳನ್ನು ಸರಕಾರವು ಗುರುತಿಸಿದ್ದು, ಅವುಗಳ ಅಭಿವೃದ್ಧಿಗೆ ಸಮಗ್ರವಾದ ದೃಷ್ಟಿಕೋನವನ್ನು ತಾಳುವಂತೆ ಪ್ರಧಾನಿ ತಿಳಿಸಿದರು.