ರಾಂಚಿ: ಜಾರ್ಖಂಡ್‌ನ ಗಿರಿದಿಹ್ ಬಳಿ ಕಳೆದ ರಾತ್ರಿ ನಕ್ಸಲೀಯರು ರೈಲು ಹಳಿಯನ್ನು ಸ್ಫೋಟಿಸಿದ್ದಾರೆಂದು ತಿಳಿದುಬಂದಿದೆ.
ರೈಲು ಹಳಿಗಳನ್ನು ಸ್ಫೋಟಿಸಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಈ ಮಾರ್ಗದಲ್ಲಿ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ. ಅಲ್ಲದೆ, ರಾಜಧಾನಿ ಸೇರಿದಂತೆ ಹಲವು ರೈಲುಗಳ ಮಾರ್ಗವನ್ನೂ ಬದಲಾಯಿಸಲಾಗಿದೆ.
ಪೂರ್ವ ಮಧ್ಯ ರೈಲ್ವೆಯ ಸಿಪಿಆರ್‌ಒ ರಾಜೇಶ್ ಕುಮಾರ್ ಪ್ರಕಾರ, ಗಸ್ತು ಸಿಬ್ಬಂದಿ ಗೌರವ್ ರಾಜ್ ಮತ್ತು ರೋಹಿತ್ ಕುಮಾರ್ ಸಿಂಗ್ ಅವರು ಚಿಚಾಕಿಯ ಸ್ಟೇಷನ್ ಮಾಸ್ಟರ್‌ಗೆ ಮಾಹಿತಿ ನೀಡಿದ್ದು, ಧನ್‌ಬಾದ್ ವಿಭಾಗದ ಕರಮಾಬಾದ್-ಚಿಚಾಕಿ ನಿಲ್ದಾಣದ ನಡುವೆ ಸ್ಫೋಟ ಸಂಭವಿಸಿದೆ.
ಮಾಹಿತಿ ಬಳಿಕ ಹೌರಾ-ದೆಹಲಿ ರೈಲು ಮಾರ್ಗದ ಗೊಮೊ-ಗಯಾ (ಜಿಸಿ) ರೈಲು ವಿಭಾಗದಲ್ಲಿ ಒಳಬರುವ ಮತ್ತು ಹೊರಹೋಗುವ ಮಾರ್ಗದ ಕಾರ್ಯಾಚರಣೆಗಳನ್ನು ಸದ್ಯ ಭದ್ರತಾ ಕಾರಣಗಳಿಂದ ನಿಲ್ಲಿಸಲಾಗಿದೆ.