ಬದಿಯಡ್ಕ: ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಯುಪಿ ವಿಭಾಗದ ವಿದ್ಯಾರ್ಥಿಗಳು ಅಡಿಕೆ ಮಾರುಕಟ್ಟೆಯ ಬಗ್ಗೆ ತಿಳಿಯುವ ಸಲುವಾಗಿ ಶಾಲಾ ಸಮೀಪದಲ್ಲಿರುವ ಅಡಿಕೆ ಖರೀದಿ ಘಟಕಕ್ಕೆ ಭೇಟಿನೀಡಿದರು. ಗಣೇಶ ಆಚಾರ್ಯ, ನವ್ಯ ಕುಡುವ ಹಾಗೂ ಸುಪ್ರೀತ ದಂಬೆಮೂಲೆ ನೇತೃತ್ವ ವಹಿಸಿದ್ದರು. ಅಡಿಕೆ ಖರೀದಿಯ ವಿಧಾನ, ವಿಭಾಗೀಕರಣದ ವ್ಯವಸ್ಥೆ ಹಾಗೂ ದಾಸ್ತಾನೀಕರಣ ಇತ್ಯಾದಿ ವಿಚಾರಗಳನ್ನು ಸಂಸ್ಥೆಯ ಮುಖ್ಯಸ್ಥರು ತಿಳಿಸಿಕೊಟ್ಟರು.