HEALTH TIPS

ಹೂಡಿಕೆದಾರರಿಗೆ ನೆರವಾಗಲು ಸೆಬಿ ‘ಸಾಥಿ’ ಆಪ್..!

     ನವದೆಹಲಿ: ಬಂಡವಾಳ ಮಾರುಕಟ್ಟೆ ನಿಯಂತ್ರಕ ಸೆಬಿ ಈಗ ‘ಸಾರಥಿ’ ಎಂಬ ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ. 

     ಬಂಡವಾಳ ಮಾರುಕಟ್ಟೆ ಬಗ್ಗೆ ಹೂಡಿಕೆದಾರರಲ್ಲಿ ಸುಲಭವಾಗಿ ಜಾಗೃತಿ ಮೂಡಿಸಲು ಇದನ್ನು ಅಭಿವೃದ್ದಿ ಪಡಿಸಲಾಗಿದೆ ಎಂದು ಸೆಬಿ ಅಧ್ಯಕ್ಷ ಅಜಯ್ ತ್ಯಾಗಿ ಆ್ಯಪ್ ಬಿಡುಗಡೆ ಸಂದರ್ಭದಲ್ಲಿ ಹೇಳಿದ್ದಾರೆ. ಹೂಡಿಕೆದಾರರಿಗೆ ಭದ್ರತಾ ಮಾರುಕಟ್ಟೆಗಳ ಮೂಲಭೂತ ವಿಷಯಗಳ ಬಗ್ಗೆ ಹೆಚ್ಚಿನ  ಮಾಹಿತಿ, ಜ್ಞಾನವನ್ನು ಇದು ಒದಗಿಸಲಿದೆ ಎಂದು ಹೇಳಿದರು.

     ಷೇರು ಪೇಟೆಗಳಲ್ಲಿ ಇತ್ತೀಚೆಗೆ ಚಿಲ್ಲರೆ ಹೂಡಿಕೆದಾರರ ಸಂಖ್ಯೆ ಹೆಚ್ಚಳ ಜೊತೆಗೆ, ಹೂಡಿಕೆಯ ಒಳಹರಿವು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆ್ಯಪ್ ಬಿಡುಗಡೆಗೊಳಿಸಲಾಗಿದೆ ಎಂಬುದು ವಿಶ್ಲೇಷಕರ ಅಭಿಮತವಾಗಿದೆ. ಮೊಬೈಲ್ ಫೋನ್‌ಗಳ ಮೂಲಕ ಅತಿ ಹೆಚ್ಚು ವಹಿವಾಟು  ನಡೆಯುತ್ತಿರುವುದರಿಂದ ಆ್ಯಪ್ ವಿನ್ಯಾಸಗೊಳಿಸಲಾಗಿದೆ ಎಂದು ತ್ಯಾಗಿ ವಿವರಿಸಿದ್ದಾರೆ.
     ಕೆವೈಸಿ ಪ್ರಕ್ರಿಯೆ, ವಹಿವಾಟು ಮತ್ತು ಇತ್ಯರ್ಥ, ಮ್ಯೂಚುವಲ್ ಫಂಡ್‌, ಈಚಿನ ಮಾರುಕಟ್ಟೆ ಬೆಳವಣಿಗೆಗಳು, ಹೂಡಿಕೆದಾರರ ಸಮಸ್ಯೆ ಇತ್ಯರ್ಥಪಡಿಸುವ ವ್ಯವಸ್ಥೆ ಸೇರಿದಂತೆ ಹಲವು ಅಂಶಗಳ ಬಗ್ಗೆ ಈ ಆ್ಯಪ್‌ ಅರಿವು ಮೂಡಿಸಲಿದೆ. ಈಗ ಈ ಆ್ಯಪ್‌, ಹಿಂದಿ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ  ಲಭ್ಯವಿದೆ. ಮುಂಬರುವ ದಿನಗಳಲ್ಲಿ ಕೆಲವು ಪ್ರಾದೇಶಿಕ ಭಾಷೆಗಳಲ್ಲಿಯೂ ಈ ಆ್ಯಪ್‌ ಲಭ್ಯವಾಗಲಿದೆ ಎಂದು ತ್ಯಾಗಿ ತಿಳಿಸಿದ್ದಾರೆ. ಆ್ಯಂಡ್ರಾಯ್ಡ್‌ ಮತ್ತು ಐಒಎಸ್‌ನಲ್ಲಿ ಇದು ಲಭ್ಯವಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries