HEALTH TIPS

ಪಂದಳಂಗೆ ಹಿಂತಿರುಗಿದ ಸ್ವಾಮಿ ಅಯ್ಯಪ್ಪನ ಪವಿತ್ರ ಆಭರಣ: ವಾದ್ಯಮೇಳಗಳೊಂದಿಗೆ ಮೆರವಣಿಗೆಗೆ ಸ್ವಾಗತ

                              

                    ಪಂದಳಂ:ಶಬರಿಮಲೆ ಸನ್ನಿಧಿಯ ಪವಿತ್ರ ಆಭರಣ ಮೆರವಣಿಗೆ ಪಂದಳಂಗೆ ಮರಳಿದೆ. ಬೆಳಗ್ಗೆ ವಲಿಯಕೋಯಿಕ್ಕಲ್ ದೇವಸ್ಥಾನಕ್ಕೆ ಆಗಮಿಸಿದ ತಿರುವಾಭರಣಂಗಳನ್ನು ವಿಧಿ ವಿಧಾನಗಳ ನಂತರ ಅರಮನೆಯ ಸುರಕ್ಷಿತ ಕೊಠಡಿಗೆ ಸ್ಥಳಾಂತರಿಸಲಾಯಿತು.

                 ಕುಂಭ ಮಾಸದ್ತ ವಿಷುವಿನಂದು ವಲಿಯಕೋಯಿಕ್ಕಲ್ ದೇವಸ್ಥಾನದಲ್ಲಿ ಶಬರಿಮಲೆ ಸನ್ನಿಧಿಗಾಗಿ ಪವಿತ್ರ ಆಭÀರಣಗಳನ್ನು ತೆಗೆಯಲಾಗುತ್ತದೆ. ಮೆರವಣಿಗೆ ಮೂಲಕ ಬೆಳಗ್ಗೆ ಅರನ್ಮುಳದಿಂದ ಹೊರಟು ಕುರಿಯಾನಿಪಳ್ಳಿ, ಉಳ್ಳನ್ನೂರು ಮತ್ತು ಕುಳನಾಡ ಮೂಲಕ 7 ಗಂಟೆಗೆ ಪಂದಳಂ ತಲುಪಿತು. ಮೆರವಣಿಗೆಯನ್ನು ವಲಿಯಪಾಲಂನಲ್ಲಿ ವಾದ್ಯಗಳ ಮೇಳದೊಂದಿಗೆ ಬರಮಾಡಿಕೊಳ್ಳಲಾಯಿತು.

            ಬಳಿಕ ಅಯ್ಯಪ್ಪ ಸೇವಾ ಸಂಘವನ್ನು ಮಣಿಕಂಠನ್ ಬಲಿಪೀಠ ಮತ್ತು ಮೇಡಕಲ್ಲಿನ ಪಂದಳಂ ಅರಮನೆ ನಿರ್ವಹಣಾ ತಂಡದಿಂದ ಬರಮಾಡಿಕೊಳ್ಳಲಾಯಿತು. ಸಮಾರಂಭಗಳ ನಂತರ ಆಭರಣಗಳನ್ನು  ಅರಮನೆಯ ಸುರಕ್ಷಿತ ಕೋಣೆಗೆ ಸ್ಥಳಾಂತರಿಸಲಾಯಿತು. ಅಯ್ಯಪ್ಪನ ಜನ್ಮದಿನವಾದ ಕುಂಭ ಮಾಸದ ದಿನ ಹಾಗೂ ವಿಷು ದಿನದಂದು ವಲಿಯಕೋಯಿಕ್ಕಲ್ ದೇವಸ್ಥಾನದಲ್ಲಿ ದರ್ಶನಕ್ಕೆ ಆಭರಣಗಳನ್ನು ಪ್ರದರ್ಶಿಸಲಾಗುತ್ತದೆ. 

             ಈ ವರ್ಷದ ತೀರ್ಥಾಟನೆ ಆರಂಭವಾದಾಗಿನಿಂದಲೂ ಪಂದಳಂ ಅರಮನೆಗೆ ಪವಿತ್ರ ಆಭÀರಣಗಳನ್ನು ನೋಡಲು ಅನೇಕ ಭಕ್ತರು ಆಗಮಿಸುತ್ತಾರೆ.  ತಿರುವಾಭರಣ ಮೆರವಣಿಗೆಯಲ್ಲಿ ನೂರಾರು ಭಕ್ತರು ಕೂಡ ಜೊತೆಯಾಗಿದ್ದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries