ಬದಿಯಡ್ಕ: ಕಾರ್ಕಳ ತಾಲ್ಲೂಕಿನ ಅಜೆಕಾರು ಕುರ್ಪಾಡಿ ಪುರಾತನ ಬೊಬ್ಬರ್ಯ ಸ್ಥಾನದ ಪರಿಸರದಲ್ಲಿ ನಡೆದ ಆದಿಗ್ರಾಮೋತ್ಸವ ಕಾರ್ಯಕ್ರಮದಲ್ಲಿ ಕಾಸರಗೋಡು ನೆಲ್ಲಿಕ್ಕಟ್ಟೆ ಚೂರಿಪ್ಪಳ್ಳದ ಪ್ರಕೃತಿ ಆಯುರ್ವೇದ ಆಸ್ಪತ್ರೆಯ ವೈದ್ಯೆ ಡಾ. ವಾಣಿಶ್ರೀ ಕಾಸರಗೋಡು ಇವರಿಗೆ ವೈದ್ಯಕೀಯ ಹಾಗೂ ಸಾಹಿತ್ಯಕ್ಷೇತ್ರದ ಸಾಧನೆಗಾಗಿ "ಯುವಸಿರಿ" ಗೌರವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಕಳೆದ 23 ವರುಷಗಳಿಂದ ನಡೆಸಿಕೊಂಡು ಬರುತ್ತಿರುವ ಆದಿ ಗ್ರಾಮೋತ್ಸವ ಎಂಬ ಕಾರ್ಯಕ್ರಮವನ್ನು ತಲ್ಲೂರು ಶಿವರಾಮ ಶೆಟ್ಟಿ ಉದ್ಘಾಟಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವನಾಥ ಶೆಣೈ ಉಡುಪಿ,ಗೌರವಾಧ್ಯಕ್ಷರು ವಿಶ್ವ ಸಂಸ್ಕøತಿ ಪ್ರತಿಷ್ಠಾನ ಇವರು ವಹಿಸಿದ್ದರು. ಧರ್ಮದರ್ಶಿ ಹರಿಕೃಷ್ಣ ಪುನರೂರು ಇವರು ಪ್ರಶಸ್ತಿ ಪ್ರಧಾನ ಮಾಡಿದರು.
ಪ್ರಶಸ್ತಿ ಸ್ವೀಕಾರದ ಧನ್ಯವಾದ ತಿಳಿಸುತ್ತಾ ವೈದ್ಯಕೀಯ ವೃತ್ತಿಯ ಜೊತೆ ಸಾಹಿತ್ಯವನ್ನು ಸ್ವೀಕರಿಸಿ ಕಠಿಣ ಪರಿಶ್ರಮದಿಂದ ಇಷ್ಟು ಬೆಳೆದು ನಿಂತಿದ್ದೇನೆ. ಕಾಸರಗೋಡಿನ ಎಲ್ಲಾ ಕನ್ನಡ ಮನಸ್ಸುಗಳ ಪರವಾಗಿ ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದೇನೆ ಎಂದು ಡಾ.ವಾಣಿಶ್ರೀ ತಿಳಿಸಿದರು. ಯುವ ಮನಸ್ಸುಗಳಿಗೆ ಸಾಹಿತ್ಯದ ಸಂಪತ್ತನ್ನು ನೀಡುವ ಮೂಲಕ, ಸಮಾಜದಲ್ಲಿ ಸಂಸ್ಕೃತಿಯನ್ನು ಸಔವರ್ಧನೆಗೊಳಿಸುವ ಕೆಲಸವನ್ನು ಶೇಖರ್ ಅಜೆಕಾರ್ ಅವರು ಹಲವು ವರ್ಷಗಳಿಂದ ಮಾಡುತ್ತಿರುವುದು ಸ್ತುತ್ಯರ್ಹ ಎಂದರು.