ಮಕರ ಸಂಕ್ರಾಂತಿಗೆ ಎಳ್ಳು-ಬೆಲ್ಲದ ರೆಸಿಪಿ ನಾವೆಲ್ಲಾ ಮಾಡುತ್ತೇವೆ, ಇದರ ಜೊತೆಗೆ ವಿಶೇಷವಾದ ಇನ್ನಿತರ ಸಿಹಿ ತಿಂಡಿಗಳನ್ನು ಮಾಡ ಬಯಸುವುದಾದರೆ ಬೆಂಗಾಳಿ ಶೈಲಿಯ ಗೋಕುಲ ಪಿಥೆ ಟ್ರೈ ಮಾಡಬಹುದು, ಇದು ತುಂಬಾ ರುಚಿಯಾಗಿರುತ್ತೆ ಅಲ್ಲದೆ ಮಾಡುವ ವಿಧಾನ ಕೂಡ ಸರಳವಾಗಿದೆ.
ಬೇಕಾಗುವ ಸಾಮಗ್ರಿ ತುರಿದ ತೆಂಗಿನಕಾಯಿ-250 ಗ್ರಾಂ ಕೋಯಾ:500ಗ್ರಾಂ ಕಪ್ಪು ಬೆಲ್ಲ 11/2 ಕಪ್ ಮೈದಾ 3/4 ಕಪ್ ತುಪ್ಪ 1 ಕಪ್ 2 ಚಮಚ ಸೂಜಿ ರವೆ 2 ಕಪ್ ಕೆನೆ ಹಾಲು (ಕಾಲು ಲೀಟರ್) /Otional ಚಿಟಿಕೆಯಷ್ಟು ಉಪ್ಪು ಪಾಕ ಮಾಡಲು 200ಗ್ರಾಂ ಬೆಲ್ಲ 3 ಕಪ್ ನೀರು ಫ್ರೈ ಮಾಡಲು 1 ಕಪ್ ಎಣ್ಣೆ 1 ಚಮಚ ತುಪ್ಪಮಾಡುವ ವಿಧಾನ * ಬೆಲ್ಲವನ್ನು ತುರಿಯಿರಿ ಅಥವಾ ಚಿಕ್ಕದಾಗಿ ಪುಡಿ ಮಾಡಿ ಇಟ್ಟುಕೊಳ್ಳಿ * ನಾನ್‌ಸ್ಟಿಕ್ ಪ್ಯಾನ್ ಬಿಸಿ ಮಾಡಿ ಅದರಲ್ಲಿ ತೆಂಗಿನ ತುರಿ ಹಾಕಿ ಕಡಿಮೆ ಉರಿಯಲ್ಲಿ ಫ್ರೈ ಮಾಡಿ. ಅದನ್ನು ಹುರಿಯುವಾಗ ಅದರಿಂದ ಒಳ್ಳೆಯ ಘಮ ಬರುತ್ತೆ, ಅಷ್ಟರವರೆಗೆ ಹುರಿಯಿರಿ. * ಈಗ ತುರಿದ ಕೋವಾ ಸೇರಿಸಿ. * ತೆಂಗಿನ ತುರಿ ಜೊತೆ ಕೋವಾ ಸಂಪೂರ್ಣ ಮಿಶ್ರ ಆಗುವವರೆಗೆ ಫ್ರೈ ಮಾಡಿ. * ಮಿಶ್ರಣ ಮಂದವಾಗಬೇಕು, ಈಗ ಬೆಲ್ಲ ಹಾಕಿ, ಆಗ ಮಿಶ್ರಣ ಅಂಟು-ಅಂಟಾಗುವುದು * ಈಗ ಉರಿ ಆಫ್ ಮಾಡಿ * ಈಗ ಚಿಕ್ಕ-ಚಿಕ್ಕ ಉಂಡೆಗಳನ್ನಾಗಿ ಮಾಡಿ. ಒಳಗೆ ತುಂಬಲು * ಈಗ ಹಾಲನ್ನು ಬಿಸಿ ಮಾಡಿ, ಅದಕ್ಕೆ ರವೆ ಹಾಕಿ ಕುದಿಸಿ * ಈಗ ಉಪ್ಪು ಹಾಕಿ, ಅದಕ್ಕೆ ಮೈದಾ ಹಾಗೂ ಸ್ವಲ್ಪ ಅಕ್ಕಿಹಿಟ್ಟು ಸೇರಿಸಿ * ಗಂಟು-ಗಂಟಾಗದಿರಲು ಸೌಟ್‌ನಿಂದ ತಿರುಗಿಸುತ್ತಾ ಇರಬೇಕು * ಮಿಶ್ರಣ ಸ್ವಲ್ಪ ಗಟ್ಟಿಯಾದ ಮೇಲೆ ಗ್ಯಾಸ್ ಉರಿ ಆಫ್ ಮಾಡಿ. ಬೆಲ್ಲ ಪಾಕ ತಯಾರಿಸಿ 3 ಕಪ್ ನೀರಿಗೆ ಬೆಲ್ಲ ಹಾಕಿ ಕುದಿಸಿ ಬೆಲ್ಲ ಪಾಕ ತಯಾರಿಸಿ, ಪಾಕ ಸ್ವಲ್ಪ ಮಂದವಾಗಿರಲಿ. ನಂತರ ಸೋಸಿ. ಎಣ್ಣೆಯಲ್ಲಿ ಕರಿಯಲು * ಎಣ್ಣೆಗೆ 1 ಚಮಚ ತುಪ್ಪ ಸೇರಿಸಿ ಕುದಿಸಿ * ಈಗ ಬಾಲ್‌ಗೆ ತಯಾರು ಮಾಡಿಟ್ಟ ಮೈದಾ ಹಿಟ್ಟು ಅಂಟಿಸಿ, ನಂತರ ಎಣ್ನೆ ಕಾದಾಗ ಒಂದೊಂದೇ ಎಣ್ಣೆಯಲ್ಲಿ ಬಿಟ್ಟು ಕರಿದು ತೆಗೆಯಿರಿ. * ನಂತರ ಎಣ್ಣೆಯಲ್ಲಿ ಕರಿದ ತಿಂಡಿಯನ್ನು ಸಕ್ಕರೆ ಪಾಕ ಅಥವಾ ಬೆಲ್ಲ ಪಾಕದಲ್ಲಿ 2-3 ನಿಮಿಷ ಹಾಕಿಡಿ. ನಂತರ ತೆಗೆದು ಬೌಲ್‌ನಲ್ಲಿ ಹಾಕಿ. ಸರ್ವ್ ಮಾಡುವಾಗ ಒಂದು ಚಮಚ ಬೆಲ್ಲದ ಸಿರಪ್ ಹಾಕಿ ಸವಿಯಬಹುದು.
INSTRUCTIONS ನೀವು ಎಣ್ಣೆಗೆ ಹಾಕುವ ಮುನ್ನ ಎಳ್ಳಿನಲ್ಲಿ ಮಿಶ್ರ ಮಾಡಿ ಹಾಕಬಹುದು, ಹಾಗೆಯೂ ಹಾಕಬಹುದು.