ಕಾಸರಗೋಡು: ಯಾವುದೇ ಕಾರ್ಯಕ್ರಮ ಸಂಯೋಜಿಸುವುದು ಎಂದರೆ ಬಹಳ ಶ್ರಮದಾಯಕ ಕೆಲಸ ಮತ್ತು ಜವಾಬ್ದಾರಿಯುತ ಕಾರ್ಯವಾಗಿದೆ. ಕೇವಲ ಕಾರ್ಯಕ್ರಮದ ಯೋಚನೆಯೊಂದಿದ್ದರೆ ಸಾಲದು. ಅದು ನಿರಂತರವಾದ ಯೋಜನೆಗಳನ್ನು ಕೈಗೊಳ್ಳುವುದರಿಂದ ಮಾತ್ರ ಸಾರ್ಥಕವಾಗುವುದು. ಆ ನಿಟ್ಟಿನಲ್ಲಿ ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನದ ಪಾರೆಕಟ್ಟೆಯ ಕನ್ನಡ ಗ್ರಾಮದಲ್ಲಿ ಶಿವರಾಮ ಕಾಸರಗೋಡು ನೇತೃತ್ವದಲ್ಲಿ ನಡೆಯುತ್ತಿರುವ ಹಲವಾರು ಕನ್ನಡ ಪರ ಸಾಹಿತ್ತಿಕ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳು ಶ್ಲಾಘನೀಯ ಎಂದು ಸಾಹಿತಿ, ಶಿಕ್ಷಕ, ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹರೀಶ ಸುಲಾಯ ಒಡ್ಡಂಬೆಟ್ಟು ಅಭಿಪ್ರಾಯಪಟ್ಟರು.
ಕಾಸರಗೋಡು ಜಿಲ್ಲಾ ಮಟ್ಟದ ಕನ್ನಡ ಗೀತ ಗಾಯನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಶಿವರಾಮ ಕಾಸರಗೋಡು ಅವರು ತನ್ನ ಕನ್ನಡ ಪರ ಕೆಲಸಗಳಿಂದ ಕರ್ನಾಟಕದಾದ್ಯಂತ ಕಾಸರಗೋಡಿನ ಹೆಸರನ್ನು ಪಸರಿಸಿರುತ್ತಾರೆ. ಅವರ ಕಾರ್ಯಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಧಾರ್ಮಿಕ ಮುಂದಾಳು ಕೆ.ಎನ್.ವೆಂಕಟರಮಣ ಹೊಳ್ಳ ಅವರು ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನದ ಅಧ್ಯಕ್ಷರಾದ ಶಿವರಾಮ ಕಾಸರಗೋಡು ಅವರ ಕನ್ನಡದ ಕೆಲಸವನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಅಧ್ಯಾಪಕ ಕೆ.ವಿಶ್ವನಾಥ ಮಾಸ್ತರ್, ಸಂಘಟಕ ಹರೀಶ್ಚಂದ್ರ ಕೂಡ್ಲು, ಬಿ.ಸತೀಶ್ ಕೂಡ್ಲು, ಕೆಸಿಎನ್ ಚಾನೆಲ್ ನಿರ್ದೇಶಕ ಪುರುಷೋತ್ತಮ ನಾೈಕ್ ಮೊದಲಾದವರು ಉಪಸ್ಥಿತರಿದ್ದರು. ದಿವಾಕರ ಅಶೋಕನಗರ ಸ್ವಾಗತಿಸಿ, ಶಿವರಾಮ ಕಾಸರಗೋಡು ವಂದಿಸಿದರು.