ವರ್ಕಳ: ವಿದೇಶಿ ಮಹಿಳೆಯೊಬ್ಬರು ವರ್ಕಳದ ಸಮುದ್ರ ಹಾಗೂ ಅಲೆಗಳನ್ನು ಕಣ್ತುಂಬಿಕೊಂಡಿದ್ದಾರೆ. ಭಾಷೆ, ದೇಶದ ಎಲ್ಲೆಗಳನ್ನು ಭೇದಿಸಿದ ಹೆಲೆನ್ ಮತ್ತು ಮನೋರಂಜನ್ ಎಂಬ ಜೋಡಿ ಜೀವನ ಸಂಗಾತಿಗಳಾದರು. ನಾಲ್ಕು ವರ್ಷಗಳ ಪ್ರೀತಿಯ ನಂತರ ದಂಪತಿಗಳು ಮತ್ತೆ ಒಂದಾದರು. ಒರಿಸ್ಸಾ ಮೂಲದ ಮನೋರಂಜನ್, ನಾಲ್ಕು ವರ್ಷಗಳ ಪ್ರೇಮದ ನಂತರ ಐಸ್ಲ್ಯಾಂಡ್ ಮೂಲದ ಹೆ¯ನ್ ಳನ್ನು ವಿವಾಹವಾದರು.
ಮನೋರಂಜನ್ ಕಳೆದ 18 ವರ್ಷಗಳಿಂದ ವರ್ಕಳದ ಪ್ರವಾಸಿ ಪ್ರದೇಶದಲ್ಲಿ ಯೋಗ ಕೇಂದ್ರವನ್ನು ನಡೆಸುತ್ತಿದ್ದಾರೆ. ಮನೋರಂಜನ್ ಅವರು ಐಸ್ಲ್ಯಾಂಡ್ ಮೂಲದ ಹೆಲೆನ್ ಅವರನ್ನು ನೇಪಾಳದಲ್ಲಿ ಭೇಟಿಯಾದರು. ಸ್ನೇಹ ನಂತರ ಪ್ರೀತಿ ಮತ್ತು ವಿವಾಹದ ವರೆಗೆ ತಲಪಿತು. ವರ್ಕಳ ಶಿವಗಿರಿ ಗುರುದೇವರ ಮುಂದೆ ಮನೋರಂಜನ್ ಹೆಲೆನಾ ಅವರ ಕುತ್ತಿಗೆಗೆ ತಾಳಿ ಕಟ್ಟಿದರು. ವಿವಾಹ ಕೊರೋನಾ ಮಾನದಂಡಗಳೊಂದಿಗೆ ಸರಳವಾಗಿ ನೆರವೇರಿತು. ಸಮಾರಂಭದಲ್ಲಿ ಒರಿಸ್ಸಾದ ಮನೋರಂಜನ್ ಕುಟುಂಬ ಹಾಗೂ ಐಸ್ ಲ್ಯಾಂಡ್ ನ ಹೆಲ್ ಕುಟುಂಬಸ್ಥರು ಉಪಸ್ಥಿತರಿದ್ದರು.