ಕಾಸರಗೋಡು: ರಾಜ್ಯದ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಲಿಟಲ್ ಕೈಟ್ಸ್ ಘಟಕಗಳಲ್ಲಿ ಶಾಲಾ ಮಟ್ಟದ ಶಿಬಿರಗಳು ಪೂರ್ಣಗೊಂಡಿವೆ. ಈ ಶೈಕ್ಷಣಿಕ ವರ್ಷದಲ್ಲಿ ನಡೆಸಿದ ಸಾಫ್ಟ್ ವೇರ್ ಆಧಾರಿತ ಸಾಮಥ್ರ್ಯ ಪರೀಕ್ಷೆಯ ಮೂಲಕ ಆಯ್ಕೆಯಾದ 112 ಘಟಕಗಳ 3135 ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು. ಈ ಬಗ್ಗೆ ಕೈಟ್ ಸಿಇಒ ಕೆ.ಕೆ. ಅನ್ವರ್ ಸಾದತ್ ಮಾಹಿತಿ ನೀಡಿದರು.
ಶಿಬಿರವು ಮುಖ್ಯವಾಗಿ ಪ್ರೋಗ್ರಾಮಿಂಗ್ ಮತ್ತು ಅನಿಮೇಷನ್‍ನ ಸಾಧ್ಯತೆಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಚಟುವಟಿಕೆಗಳ ಮೇಲೆ ಕೇಂದ್ರೀಕರಿಸಿತ್ತು. ಸೆಷನ್ ಗಳಲ್ಲಿ ಫೇಸ್ ಡಿಟೆಕ್ಷನ್ ಗೇಮ್, ಸ್ಕ್ರ್ಯಾಚ್ ಆಫ್‍ಲೈನ್ ಎಡಿಟರ್‍ನೊಂದಿಗೆ ಕಾರ್ ರೇಸಿಂಗ್ ಆಟ, 'ಜರ್ನಿ ಆಫ್ ಎ ಲಾಸ್ಟ್ ನಾಟ್' ಥೀಮ್ ನ್ನು ಆಧರಿಸಿ ಟುಪಿ ಟ್ಯೂಬ್ ಡೆಸ್ಕ್‍ನಲ್ಲಿ ಅನಿಮೇಷನ್ ಫಿಲ್ಮ್ ಮೇಕಿಂಗ್ ಮತ್ತು ಮೊಬೈಲ್ ಅಪ್ಲಿಕೇಶನ್ ನ್ನು ಹೇಗೆ ರಚಿಸುವುದು ಎಂಬವುಗಳಿದ್ದವು. ಶಿಬಿರದ ಮೊದಲು ಈ ಬಗ್ಗೆ ತರಬೇತಿ ಪಡೆದ ಶಿಕ್ಷಕರ ಮಾರ್ಗದರ್ಶನದಲ್ಲಿ ಶಾಲಾ ಶಿಬಿರಗಳನ್ನು ಆಯೋಜಿಸಲಾಗಿತ್ತು.
ಕಳೆದ ಅವಧಿಯಲ್ಲಿ ಲಿಟಲ್ ಕೈಟ್ಸ್ ಮಾಸ್ಟರ್ ತರಬೇತುದಾರರು ಹೈಟೆಕ್ ಯೋಜನೆಯ ಚಟುವಟಿಕೆಗಳಲ್ಲಿ ಲಿಟಲ್ ಕೈಟ್ ಗಳು ಏನು ಮಾಡಬೇಕು ಎಂಬುದರ ಕುರಿತು ವೀಡಿಯೊ ಕಾನ್ಫರೆನ್ಸ್ ಮೂಲಕ ಮಕ್ಕಳೊಂದಿಗೆ ಮಾತನಾಡಿದರು. ಶಿಬಿರದ ಮುಂದುವರಿಕೆಯಾಗಿ ವಿದ್ಯಾರ್ಥಿಗಳಿಗೆ ನೀಡಿದ ಚಟುವಟಿಕೆಗಳನ್ನು ಪೂರ್ಣಗೊಳಿಸಿದ ನಂತರ ವಿದ್ಯಾರ್ಥಿಗಳನ್ನು ಉಪಜಿಲ್ಲಾ ಶಿಬಿರಕ್ಕೆ ಆಯ್ಕೆ ಮಾಡಲಾಗಿತ್ತು.