ಕಾಸರಗೋಡು: ಕೇರಳ ರಾಜ್ಯ ಮಣ್ಣಿನ ಮಡಕೆ ನಿರ್ಮಾಣ-ಮಾರಾಟ ಕ್ಷೇಮಾಭಿವೃದ್ಧಿ ನಿಗಮದ ವತಿಯಿಂದ ಮಣ್ಣಿನ ಪಾತ್ರೆ ಉತ್ಪನ್ನಗಳ ನಿರ್ಮಾಣವನ್ನು ಕುಲಕಸುಬಾಗಿ ಸ್ವೀಕರಿಸಿರುವ ಸಮುದಾಯದಲ್ಲಿ ಒಳಗೊಂಡವರಿಗೆ ಪ್ರಸಕ್ತ ಇರುವ ಉದ್ದಿಮೆಯನ್ನು ಅಭಿವೃದ್ಧಿಪಡಿಸಲು ಹಾಗೂ ಹೊಸ ಉದ್ದಿಮೆ ಆರಂಭಿಸಲು ಸಾಲ ನೀಡಲಾಗುವುದು.
ಸಾಲದ ಮೊತ್ತ ಎರಡು ಲಕ್ಷ ರೂ. ಆಗಿದ್ದು, ಶೇ. ಆರು ಬಡ್ಡಿ ದರ ಇರಲಿದೆ. 60 ತಿಂಗಳಲ್ಲಿ ಸಾಲ ಮರುಪಾವತಿ ಮಾಡಬೇಕಾಗಿದೆ. ಸಾಲಕ್ಕೆ ಜಾಮೀನು ವ್ಯವಸ್ಥೆ ಬಾಧಕವಾಗಲಿದೆ. ಫಲಾನುಭವಿಗಳು ಪಾರಂಪರಿಕ ಮಣ್ಣಿನ ಮಡಕೆ ತಯಾರಿಸುವ ಕುಲಕಸುಬಿನವರಾಗಿರಬೇಕು ಅಥವಾ ಅವರ ಆಶ್ರಿತರಾಗಿದ್ದು, 18ರಿಂದ 55ವರ್ಷದೊಳಗಿನವರಾಗಿರಬೇಕು. ಕುಟುಂಬದ ವಾರ್ಷಿಕ ಆದಾಯ ಮೂರು ಲಕ್ಷ ಮೀರಿರಬಾರದು. ಸಾಲಕ್ಕಾಗಿನ ಅರ್ಜಿ ಮತ್ತು ಇದಕ್ಕೆ ಸಂಬಂಧಿಸಿದ ಮಾಹಿತಿ ನಿಗಮದ ವೆಬ್‍ಸೈಟ್((www.keralapottery.org) ನಲ್ಲಿ ಲಭ್ಯವಿದ್ದು, ಫೆ. 10ರ ಮುಂಚಿತವಾಗಿ ಎಂ.ಡಿ, ಕೇರಳ ರಾಜ್ಯ ಮಣ್ಣಿನ ಮಡಕೆ ನಿರ್ಮಾಣ-ಮಾರಾಟ ಕ್ಷೇಮಾಭಿವೃದ್ಧಿ ನಿಗಮ, ಅಯ್ಯಂಗಾಳಿ ಭವನ, ಎರಡನೇ ಮಹಡಿ, ಕನಕ ನಗರ, ಕವಡಿಯಾರ್ ಅಂಚೆ, ತಿರುವನಂತಪುರ-695003 ಎಂಬ ವಿಳಾಸಕ್ಕೆ ಸಲ್ಲಿಸಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ(0471 2727010, 9497690651,99460651)ಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.