ಕೋಝಿಕ್ಕೋಡ್: ಇಡುಕ್ಕಿಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ ಧೀರಜ್(21)ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಯುವ ಕಾಂಗ್ರೆಸ್ ಸ್ಥಳೀಯ ನೇತಾರ ನಿಖಿಲ್ ಪೈಲಿ ಬಂಧಿತ. ಇಡುಕ್ಕಿ ಕರಿಮಣಲ್‍ನಿಂದ ಈತ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಧ್ಯೆ ಪೊಲೀಸರು ಬಂಧಿಸಿದ್ದಾರೆ.ಘಟನಾ ಸ್ಥಳದಿಂದ ಈತ ಪರಾರಿಯಾಗುತ್ತಿದ್ದಂತೆ ಪೊಲೀಸರು ಈತನ ಮೊಬೈಲ್ ಫೋನ್ ಲೊಕೇಶನ್ ಕೇಂದ್ರೀಕರಿಸಿ ಕಾರ್ಯಾಚರಣೆ ಆರಂಭಿಸಿದ್ದರು. ಕೊಲೆಯಾಘಿರುವ ಧೀರಜ್ ಏಳನೇ ಸೆಮಿಸ್ಟರ್ ಬಿ.ಟೆಕ್ ಕಂಪ್ಯೂಟರ್ ಸಯನ್ಸ್ ವಿದ್ಯಾರ್ಥಿಯಾಗಿದ್ದರು.