ಜಿನೇವಾ: ಓಮಿಕ್ರಾನ್ ಕೊರೊನಾ ವೈರಾಣು ಶೀಘ್ರದಲ್ಲೇ ಡೆಲ್ಟಾ ಪ್ರಕರಣಗಳ ಸಂಖ್ಯೆಯನ್ನು ಹಿಂದಿಕ್ಕಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಓಮಿಕ್ರಾನ್ ವೈರಾಣು ಸುಲಭವಾಗಿ ಜನರ ರೋಗ ನಿರೋಧಕ ಕವಚವನ್ನು ಭೇದಿಸಿ ಸೋಂಕು ಹರಡಬಲ್ಲುದಾದರೂ ಅದರ ಗಂಭೀರತೆ ಹಾಗೂ ಅದು ತಂದೊಡ್ಡುವ ಸಮಸ್ಯೆಗಳು ಮಿಕ್ಕ ವೈರಾಣು ತಳಿಗಳಿಗೆ ಹೋಲಿಸಿದರೆ ಕಡಿಮೆ ಎಂದೂ ಹೇಳಿದ್ದಾರೆ.
ಓಮಿಕ್ರಾನ್ ಜಗತ್ತಿನ ಎಲ್ಲಾ ದೇಶದೊಳಕ್ಕೂ ಲಗ್ಗೆಯಿಟ್ಟಿದ್ದು ತನ್ನ ಜಾಲವನ್ನು ಹಿಗ್ಗಿಸಿಕೊಳ್ಳುತ್ತಾ ಸಾಗುತ್ತಿದೆ. ಕಳೆದ ವಾರ ಒಮಿಕ್ರಾನ್ ಸೋಂಕಿಗೆ ವಿಶ್ವಾದ್ಯಂತ 43,000 ಮಂದಿ ಮೃತಪಟ್ಟಿದ್ದಾರೆ.
ಅತಿ ಹೆಚ್ಚಿನ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಅಮೆರಿಕಾದಲ್ಲಿ ಪತ್ತೆಯಾಗಿದೆ. ನಂತರದ ಸ್ಥಾನಗಳಲ್ಲಿ ಫ್ರಾನ್ಸ್, ಬ್ರಿಟನ್, ಇಟಲಿ ಮತ್ತು ಭಾರತ ಸ್ಥಾನ ಪಡೆದಿವೆ.