ಬದಿಯಡ್ಕ:ನೀರ್ಚಾಲು ಸಮೀಪದ ಕುಕ್ಕಂಗೋಡ್ಲು ಶ್ರೀಕಂಠಪ್ಪಾಡಿ ಶ್ರೀಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ವಾರ್ಷಿಕ ಕಿರುಷಷ್ಠೀ ಮಹೋತ್ಸವ ಶನಿವಾರ ಹಾಗೂ ಭಾನುವಾರ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆದು ಸಂಪನ್ನಗೊಂಡಿತು.
ಶನಿವಾರ ಬೆಳಿಗ್ಗೆ 6ಕ್ಕೆ ಗಣಪತಿ ಹವನ, 7 ಕ್ಕೆ ದೀಪ ಪ್ರತಿಷ್ಠೆ, ಉಷಃಪೂಜೆ, 11.30 ರಿಂದ ನವಕಾಭಿಷೇಕ, 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ 1ಕ್ಕೆ ಅನ್ನಸಂತರ್ಪಣೆ ನಡೆಯಿತು. ಸಂಜೆ 5.30 ರಿಂದ ಭಜನಾ ಸಂಕೀರ್ತನೆ, 6ಕ್ಕೆ ಶ್ರೀರಕ್ತೇಶ್ವರಿಗೆ ತಂಬಿಲ ಸೇವೆ, ರಾತ್ರಿ 7.45 ರಿಂದ ಏಣಿಯರ್ಪು ಕೋದಂಬರತ್ತ್ ತರವಾಡಿನಿಂದ ಶ್ರೀವಿಷ್ಣುಮೂರ್ತಿ ದೈವದ ಭಂಡಾರ ಆಗಮನ, ರಾತ್ರಿ 8ಕ್ಕೆ ತೊಡಂಙಲ್, 9.30 ರಿಂದ ರಾತ್ರಿ ಪೂಜೆ, ಪ್ರಸಾದ ವಿತರಣೆ ನಡೆಯಿತು.
ಭಾನುವಾರ ಬೆಳಿಗ್ಗೆ 10.30ಕ್ಕೆ ಶ್ರೀವಿಷ್ಣುಮೂರ್ತಿ ದೈವದ ಕೋಲ, ಪ್ರಸಾದ ವಿತರಣೆ ನಡೆಯಿತು. ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ 2ಕ್ಕೆ ಭಂಡಾರ ಏಣಿಯರ್ಪು ತರವಾಡಿಗೆ ಹಿಂತೆರಳುವುದರೊಂದಿಗೆ ಉತ್ಸವ ಸಂಪನ್ನಗೊಂಡಿತು. ಕೋವಿಡ್ ಮಾನದಂಡಗಳೊಂದಿಗೆ ನೂರಾರು ಸಂಖ್ಯೆಯ ಸ್ಥಳೀಯ ಭಕ್ತರು ಪಾಲ್ಗೊಂಡರು.