ಕಾಸರಗೋಡು: ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ ಕಾಸರಗೋಡು ವತಿಯಿಂದ ಜಿಲ್ಲಾ ಮಟ್ಟದ ಕನ್ನಡ ಗೀತಾ ಗಾಯನ ಸ್ಪರ್ಧೆ ಜ 9ರಂದು ಮಧ್ಯಾಹ್ನ 2ರಿಂದ ಪಾರೆಕಟ್ಟ ಕನ್ನಡ ಗ್ರಾಮದಲ್ಲಿ ಜರುಗಲಿದೆ. ಬಾರಿಸು ಕನ್ನಡ ಡಿಂಡಿಮವ, ಜೋಗದ ಸಿರಿ ಬೆಳಕಿನಲ್ಲಿ, ಹುಟ್ಟಿದರೇ ಕನ್ನಡ ನಾಡಲಿ ಹುಟ್ಟಬೇಕು ಈ ಮೂರರಲ್ಲಿ ಒಂದು ಹಾಡನ್ನು ಆಯ್ಕೆ ಮಾಡಿಕೊಂಡು ಸಾಮೂಹಿಕವಾಗಿ ಹಾಡಬೇಕಾಗಿದೆ. ತಂಡದಲ್ಲಿ 8ರಿಂದ 15ಮಂದಿಗೆ ಅವಕಾಶ ಕಲ್ಪಿಸಲಾಗಿದೆ.
ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡ ಎಲ್ಲ ಗಾಯಕಿಯರನ್ನೊಳಗೊಂಡ ತಂಡದಿಂದ 'ಜಯ ಭಾರತ ಜನನಿಯ ತನುಜಾತೆ'ನಾಡಗೀತೆಯ ಸಮೂಹ ಗಾಯನ ನಡೆಯಲಿರುವುದು. ಜತೆಗೆ ವಿಜೇತರಿಗೆ ಬಹುಮಾನ, ಅಭಿನಂದನಾ ಪತ್ರ ವಿತರಿಸಲಾಗುವುದು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗಣ್ಯರನ್ನು ಅಭಿನಂದಿಸುವ ಕಾರ್ಯಕ್ರಮವೂ ಜರುಗಲಿದೆ. ಭಾಗವಹಿಸಲಿಚ್ಛಿಸುವ ತಂಡಗಳು ಶಿವರಾಮ ಕಾಸರಗೋಡು(ಮೊಬೈಲ್-9448572016)ಅಥವಾ ದಿವಾಕರ್ ಅಶೋಕ್‍ನಗರ(9495104563)ಅವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.