ನವದೆಹಲಿ: ಭಾರತದ ಪ್ರದೇಶದಲ್ಲಿ ಚೀನಾ ಯೋಧರು ತಮ್ಮ ಧ್ವಜವನ್ನು ಪ್ರದರ್ಶಿಸಿದ್ದರು ಎಂಬ ಸುದ್ದಿ ವೈರಲ್ ಆದ ಬೆನ್ನಲ್ಲೇ ಭಾರತೀಯ ಸೇನೆ ಚೀನಾ ಅಪಪ್ರಚಾರಕ್ಕೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ.
ಹೊಸ ವರ್ಷದ ಹಿನ್ನೆಲೆಯಲ್ಲಿ ಲಡಾಖ್ ನ ಗಲ್ವಾನ್ ಕಣಿವೆಯಲ್ಲಿ ತ್ರಿವರ್ಣ ಧ್ವಜಾರೋಹಣ ಮಾಡಿದೆ. ಭಾರತೀಯ ಸೇನೆಯ ಈ ನಡೆಗೂ ಮುನ್ನ, ಚೀನಾ ತನ್ನ ಹೊಸ ಗಡಿ ಕಾನೂನು ಜಾರಿಗೊಳಿಸುವುದಕ್ಕೂ ಮುನ್ನ ಅರುಣಾಚಲ ಪ್ರದೇಶದಲ್ಲಿ 15 ಕ್ಕೂ ಹೆಚ್ಚು ಪ್ರದೇಶಗಳಿಗೆ ತನ್ನ ನಕ್ಷೆಯಲ್ಲಿ ಮರುನಾಮಕರಣ ಮಾಡಲು ಸರ್ಕಾರ ಮುಂದಾಗಿದೆ ಎಂಬ ವರದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು.
ಅರುಣಾಚಲ ಪ್ರದೇಶದ ಕೆಲವು ಸ್ಥಳಗಳಿಗೆ ತನ್ನದೇ ಭಾಷೆಯ ಹೆಸರುಗಳನ್ನು ಮರುನಾಮಕರಣ ಮಾಡುವ ಚೀನಾದ ಯತ್ನದ ವರದಿಗಳನ್ನು ಭಾರತ ಸರ್ಕಾರ ಗಮನಿಸಿರುವುದಾಗಿ ಹೇಳಿದ್ದು, ಮರುನಾಮಕರಣ ಈ ವಾಸ್ತವವನ್ನು ಬದಲಾವಣೆ ಮಾಡುವುದಿಲ್ಲ ಎಂದು ಹೇಳಿದೆ.