ಕಾಸರಗೋಡು: ಅಡ್ಕತ್ತಬೈಲು ಜಿಯುಪಿ ಶಾಲೆ ನೂತನ ಕಟ್ಟಡದ ಶಂಕುಸ್ಥಾಪನೆಯನ್ನು ಬಂದರು ಮತ್ತು ಪುರಾತತ್ವ ಸಚಿವ ಅಹಮ್ಮದ್ ದೇವರ್ಕೋವಿಲ್ ನೆರವೇರಿಸಿದರು.
ಈ ಸಂದರ್ಭ ಮಾತನಾಡಿದ ಸಚಿವರು, ಯಾವುದೇ ಪ್ರದೇಶದ ಸಾಮಾಜಿಕ - ಸಾಂಸ್ಕøತಿಕ ಬೆಳವಣಿಗೆಗೆ ಸಾರ್ವಜನಿಕ ಶಾಲೆಗಳ ಬೆಳವಣಿಗೆಯೇ ಆಧಾರವಾಗಿದೆ ಎಮದು ತಿಳಿಸಿದರು. 100ನೇ ವರ್ಷಾಚರಣೆ ಆಚರಿಸುತ್ತಿರುವ ಅಡ್ಕತ್ತಬೈಲು ಜಿಯುಪಿ ಶಾಲೆಗೆ ಕಿಫ್ಬಿಯಿಂದ ಮಂಜೂರಾದ 1 ಕೋಟಿ ರೂ.ವೆಚ್ಚದ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಸಚಿವರು ಮಾತನಾಡಿದರು. ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿ ವಿದ್ಯಾರ್ಥಿಗಳ ಮಾನಸಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಸಚಿವರು ಹೇಳಿದರು. ಸಾರ್ವಜನಿಕ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಎನ್.ಎ.ನೆಲ್ಲಿಕುನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾಸರಗೋಡು ನಗರಸಭೆ ಉಪಾಧ್ಯಕ್ಷೆ ಶಂಶೀದಾ ಫಿರೋಜ್, ನಗರಸಭೆ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ರಜನಿ, ನಗರಸಭೆ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಅಬ್ಬಾಸ್ ಬೇಗಂ, ಎಸ್‍ಎಸ್‍ಕೆ ಜಿಲ್ಲಾ ಯೋಜನಾಧಿಕಾರಿ ಪಿ. ರವೀಂದ್ರನ್, ಕಾಸರಗೋಡು ನಗರ ಪಾಲಿಕೆ ಸಹಾಯಕ ಕಾರ್ಯಪಾಲಕ ಅಭಿಯಂತರ ಎನ್.ಡಿ.ದಿಲೀಶ್, ಸಹಾಯಕ ಅಭಿಯಂತರ ವಿ.ವಿ.ಉಪೇಂದ್ರನ್, ಶಾಲಾ ಮುಖ್ಯೋಪಾಧ್ಯಾಯಿನಿ ಕೆ. ಎ.ಯಶೋದಾ ಮಾತನಾಡಿದರು. ಕಾಸರಗೋಡು ನಗರಸಭೆ ಅಧ್ಯಕ್ಷ ವಿ. ಎಂ.ಮುನೀರ್ ಸ್ವಾಗತಿಸಿ, ತಾ.ಪಂ.ಅಧ್ಯಕ್ಷ ಕೆ.ಆರ್.ಹರೀಶ್ ವಂದಿಸಿದರು.