ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಚಳಿಗಾಳಿ ಉಂಟಾಗಲಿದೆ. ಎರಡು ದಿನಗಳ ನಂತರ ಶೀತಗಾಳಿ ತೀವ್ರತೆ ಕಡಿಮೆಯಾಗಬಹುದು ಎಂದು ಐಎಂಡಿ ಹೇಳಿದೆ.
ಏತನ್ಮಧ್ಯೆ, ಭಾನುವಾರ ಬೆಳಿಗ್ಗೆ 7 ಗಂಟೆಗೆ ದೆಹಲಿಯಲ್ಲಿ ಕನಿಷ್ಠ ತಾಪಮಾನ 8 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ದೆಹಲಿ ಮತ್ತು ಉತ್ತರ ಭಾರತದಲ್ಲಿ ಶೀತ ಹವಾಮಾನವು ಚಾಲ್ತಿಯಲ್ಲಿದ್ದು, ಭಾನುವಾರ ಬೆಳಿಗ್ಗೆ ದೆಹಲಿಯು ದಟ್ಟವಾದ ಮಂಜಿನಿಂದ ಆವರಿಸಲ್ಪಟ್ಟಿತ್ತು.