ನವದೆಹಲಿ: ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ದೆಹಲಿಯಲ್ಲಿರುವ ಎಲ್ಲಾ ಖಾಸಗಿ ಸಂಸ್ಥೆಗಳನ್ನು ಬಂದ್ ಮಾಡುವಂತೆ ಆದೇಶ ಹೊರಡಿಸಿದೆ. ಅಲ್ಲದೆ ಕಚೇರಿಯ ಸಿಬ್ಬಂದಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ (ವರ್ಕ್ ಫ್ರಮ್ ಹೋಮ್) ಸಲಹೆ ನೀಡಿದೆ.
ಈ ಹಿಂದೆ ಖಾಸಗಿ ಸಂಸ್ಥೆಗಳು ಶೇ.50 ಪ್ರತಿಶತ ಉದ್ಯೋಗಿಗಳನ್ನು ಇರಿಸಿಕೊಂಡು ಕೆಲಸ ಮುಂದುವರಿಸಬಹುದು ಎಂದು ಹೇಳಿತ್ತು. ಆದರೆ ಕೊರೊನಾ ಪ್ರಕರಣಗಳು ಮತ್ತೆ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಕಠಿಣ ಕ್ರಮಕ್ಕೆ ಮುಂದಾಗಿದೆ.
ಸೋಮವಾರವಷ್ಟೇ ನಗರದ ಬಾರ್ ಮತ್ತು ರೆಸ್ಟೋರೆಂಟುಗಳನ್ನು ಮುಚ್ಚುವಂತೆ ಆದೇಶ ಹೊರಡಿಸಲಾಗಿತ್ತು. ಕೇವಲ ಪಾರ್ಸೆಲ್ ಮಾತ್ರ ಅವಕಾಶ ನೀಡಲಾಗಿತ್ತು. ಕಳೆದ ಭಾನುವಾರ ಒಂದೇ ದಿನ 22,751 ಪ್ರಕರಣಗಳು ದಾಖಲಾಗಿವೆ.