ನವದೆಹಲಿ: ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಜಾಗತಿಕ ಸೂರ್ಯ ನಮಸ್ಕಾರ ಕಾರ್ಯಕ್ರಮ ಇಂದು ನಡೆಯಲಿದೆ. ಒಂದು ಕೋಟಿ ಜನರು ಪಾಲ್ಗೊಳ್ಳುವ ನಿರೀಕ್ಷೆಯಿರುವ ಈ ಕಾರ್ಯಕ್ರಮವು ಹಿಂದಿನ 75 ಲಕ್ಷ ಮಂದಿಯ ದಾಖಲೆ ಮೀರಿಸುವ ನಿರೀಕ್ಷೆಯಿದೆ. ಕೇಂದ್ರ ಆಯುಷ್ ಸಚಿವಾಲಯ ಆಯೋಜಿಸಿರುವ ಸೂರ್ಯ ಪ್ರಾರ್ಥನೆ ಕಾರ್ಯಕ್ರಮ ಇಂದು (ಜನವರಿ 14) ನಡೆಯಲಿದೆ.
ಮಕರ ಸಂಕ್ರಾಂತಿಯ ದಿನದಂದು ಸೂರ್ಯ ನಮಸ್ಕಾರವನ್ನು ಆಚರಿಸಲಾಗುತ್ತದೆ. ನಿಯಮಿತವಾದ ಸೂರ್ಯ ನಮಸ್ಕಾರವು ವ್ಯಕ್ತಿಯ ಚೈತನ್ಯ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ದೇಹವು ಹೆಚ್ಚಿನ ರೋಗನಿರೋಧಕ ಶಕ್ತಿಯನ್ನು ಪಡೆಯಲು ಸಾಧ್ಯವಾಗುವುದರಿಂದ ಕೊರೋನಾವನ್ನು ದೂರವಿರಿಸಲು ಇದು ಸಹಾಯ ಮಾಡುತ್ತದೆ ಎಂದು ಆಯುಷ್ ಸಚಿವ ಸರ್ಬಾನಂದ ಸೋನೋವಾಲ್ ಹೇಳಿದ್ದಾರೆ.
ಕಾರ್ಯಕ್ರಮದÀಲ್ಲಿ ಭಾರತ ಮತ್ತು ವಿದೇಶದಲ್ಲಿರುವ ಎಲ್ಲಾ ಪ್ರಮುಖ ಯೋಗ ಸಂಸ್ಥೆಗಳು, ಭಾರತೀಯ ಯೋಗ ಅಸೋಸಿಯೇಷನ್, ರಾಷ್ಟ್ರೀಯ ಯೋಗ ಕ್ರೀಡಾ ಒಕ್ಕೂಟ, ಯೋಗ ಪ್ರಮಾಣೀಕರಣ ಮಂಡಳಿ ಮತ್ತು ಹಲವಾರು ಎನ್‍ಜಿಒಗಳು ಭಾಗವಹಿಸುತ್ತವೆ.
ಭಾಗವಹಿಸುವವರು ಮತ್ತು ಯೋಗಾಸಕ್ತರು ಆಯಾ ಪೋರ್ಟಲ್‍ಗಳಲ್ಲಿ ನೋಂದಾಯಿಸಿಕೊಳ್ಳಬಹುದು ಮತ್ತು ಕಾರ್ಯಕ್ರಮಕ್ಕೆ ಹಾಜರಾಗಬಹುದು. ಆಯುಷ್ ಸಚಿವಾಲಯದ ವೆಬ್‍ಸೈಟ್‍ನಲ್ಲಿ ನೋಂದಣಿ ಲಿಂಕ್‍ಗಳು ಲಭ್ಯವಿವೆ. ಭಾಗವಹಿಸಲು ಬಯಸುವವರು ಈ ಕೆಳಗಿನ ಪೆÇೀರ್ಟಲ್‍ಗಳಲ್ಲಿ ನೋಂದಾಯಿಸಿಕೊಳ್ಳಬಹುದು:
https://yoga.ayush.gov.in/suryanamaskar
https://yogacertificationboard.nic.in/suryanamaskar/
https://www.75suryanamaskar.com