ಜಮ್ಮು: ಕಾಶ್ಮೀರವನ್ನು ಭಾರತಕ್ಕೆ ಸಂಪರ್ಕಿಸುವ 270 ಕಿ.ಮೀ ಉದ್ದದ ಜಮ್ಮು- ಶ್ರೀನಗರ ರಾಷ್ಟ್ರೀಯ ಹೆದ್ದಾರಿಯನ್ನು ಹಿಮಪಾತದ ಕಾರಣ ಬಂದ್ ಮಾಡಲಾಗಿದೆ.
ಈ ಪ್ರದೇಶದಲ್ಲಿ ಮಳೆ ಹಾಗೂ ಭಾರೀ ಹಿಮಪಾತ, ಭೂಕುಸಿತ ಕಂಡುಬಂದ ಹಿನ್ನೆಲೆ ಅಧಿಕಾರಿಗಳು ಈ ನಿರ್ಧಾರ ಕೈಗೊಂಡಿದ್ದಾರೆ.
ಈ ಹಿಂದೆ ಹಿಮಪಾತದ ಕಾರಣ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಅದರಿಂದಾಗಿ ಟ್ರಾಫಿಕ್ ಜಾಂ ಉಂಟಾಗಿತ್ತು. ಸುಮಾರು ನೂರಕ್ಕೂ ಹೆಚ್ಚು ವಾಹನಗಳು ರಸ್ತೆ ಮೇಲೆ ಸಿಲುಕಿಕೊಂಡಿದ್ದವು.
ಇದೇ ವೇಳೆ ವೈಷ್ಣೋದೇವಿ ಯಾತ್ರಾಧಾಮಕ್ಕೆ ಪ್ರಯಾಣಿಸಲು ವ್ಯವಸ್ಥೆ ಮಾಡಿದ್ದ ಹೆಲಿಕಾಪ್ಟರ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.