ತಿರುವನಂತಪುರ: ಕೇರಳ ಕರಾವಳಿ ತೀರದಲ್ಲಿ ಭಾರಿ ಪ್ರವಾಹದ ಭೀತಿ ಎದುರಾಗಿದೆ. ರಾಷ್ಟ್ರೀಯ ಸಾಗರ ಮತ್ತು ವಾಯುಮಂಡಲದ ಅಧ್ಯಯನ ಕೇಂದ್ರ ಈ ಎಚ್ಚರಿಕೆಯನ್ನು ನೀಡಿದೆ. ಶುಕ್ರವಾರ ರಾತ್ರಿ 11.30ರ ವರೆಗೆ ದೊಡ್ಡ ಅಲೆಗಳು ಮತ್ತು ಅಲೆಗಳ ಏರಿಳಿತದ ಸಾಧ್ಯತೆಗಳಿದ್ದು, ಕರಾವಳಿಯಲ್ಲಿ ವಾಸಿಸುವ ನಿವಾಸಿಗಳು ಜಾಗೃತರಾಗಿರಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೆಚ್ಚಿನ ಉಬ್ಬರವಿಳಿತಗಳ ಜೊತೆಗೆ, ಸಾಗರಗಳಲ್ಲಿ ಬಲವಾದ ಗಾಳಿ ಸಹ ನಿರೀಕ್ಷಿಸಲಾಗಿದೆ. ಕನ್ಯಾಕುಮಾರಿ ಕರಾವಳಿ ಮತ್ತು ಮನ್ನಾರ್ ಕೊಲ್ಲಿಯಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಈ ಪ್ರದೇಶಗಳಲ್ಲಿ ಗಂಟೆಗೆ 35 ರಿಂದ 45 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ.
ಅಪಾಯಕಾರಿ ಪ್ರದೇಶಗಳಲ್ಲಿ ವಾಸಿಸುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಶುಕ್ರವಾರ ರಾತ್ರಿಯವರೆಗೆ ಮೀನುಗಾರಿಕೆಯನ್ನು ನಿಷೇಧಿಸಲಾಗಿದೆ. ದೋಣಿಗಳು ಬಂದರಿನಲ್ಲಿ ಸುರಕ್ಷಿತವಾಗಿ ಲಂಗರು ಹಾಕಬೇಕು. ಮೀನುಗಾರಿಕೆ ಸಾಮಾನುಗಳನ್ನು ಸುರಕ್ಷಿತ ಸ್ಥಳದಲ್ಲಿ ಇಡಬೇಕು ಎಂದು ಹವಾಮಾನ ಇಲಾಖೆ ತಿಳಿಸಿದೆ.