ಪತ್ತನಂತಿಟ್ಟ: ಉದ್ಯಮಿಯೊಬ್ಬರು ಅಯ್ಯಪ್ಪನಿಗೆ ಅಮೂಲ್ಯ ರತ್ನಗಳಿರುವ ಚಿನ್ನದ ಕಿರೀಟವನ್ನು ಅರ್ಪಿಸಿದ್ದಾರೆ. ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ನಿವಾಸಿ ಮಾರಂ ವೆಂಕಟ ಸುಬ್ಬಯ್ಯ ಅವರು ಕಿರೀಟವನ್ನು ಅಮೂಲ್ಯವಾದ ಕಲ್ಲುಗಳೊಂದಿಗೆ ಅರ್ಪಿಸಿದರು.
ವೆಂಕಟ ಸುಬ್ಬಯ್ಯ ಅವರು 30 ವರ್ಷಗಳಿಂದ ಸನ್ನಿಧಿಗೆ ನಿರಂತರ ಭೇಟಿ ನೀಡುತ್ತಿದ್ದಾರೆ. ಇತ್ತೀಚೆಗಷ್ಟೇ ಅವರಿಗೆ ಕೊರೋನಾ ಇರುವುದು ದೃಢಪಟ್ಟಿದ್ದು, 15 ದಿನಗಳ ಕಾಲ ಐಸಿಯುನಲ್ಲಿದ್ದರು.