ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ 73 ನೇ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ತ್ರಿವರ್ಣ ಧ್ವಜಾರೋಹಣ ನೆರವೇರಿಸಿದ್ದಾರೆ.
ರಾಷ್ಟ್ರಪತಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಸಾಥ್ ನೀಡಿದರು. ಧ್ವಜಾರೋಹಣದ ಬಳಿಕ ರಾಷ್ಟ್ರಪತಿಗಳು ಗೌರವ ವಂದನೆ ಸ್ವೀಕರಿಸಿದ್ದು, ಅಶೋಕ ಚಕ್ರ ಪ್ರದಾನ ಮಾಡಿದ್ದಾರೆ. 9 ಉಗ್ರರನ್ನು ಹೊಡೆದುರುಳಿಸಿದ್ದ ಜಮ್ಮು-ಕಾಶ್ಮೀರದ ಹುತಾತ್ಮ ಎಎಸ್ ಐ ಬಾಬು ರಾಮ್ ಅವರ ಕುಟುಂಬ ಸದಸ್ಯರು ಅಶೋಕ ಚಕ್ರ ಪದಕವನ್ನು ಸ್ವೀಕರಿಸಿದರು. ಈ ಬಳಿಕ ರಾಜ್ ಪಥ್ ನಲ್ಲಿ ಪರೇಡ್ ಪ್ರಾರಂಭವಾಗಿದೆ.
ಧ್ವಜಾರೋಹಣಕ್ಕೂ ಮುನ್ನ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು. ಪ್ರಧಾನಿ ನರೇಂದ್ರ ಮೋದಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಾಥ್ ನೀಡಿದ್ದರು.