ತಿರುವನಂತಪುರ: ಕೊರೋನಾ ವಿಸ್ತರಣೆಯನ್ನು ತಡೆಯಲು ವಿಧಿಸಲಾದ ಲಾಕ್‌ಡೌನ್ ಸಮಾನಾಂತರ ನಿಯಂತ್ರಣ- ನಿರ್ಬಂಧಗಳು ನಾಳೆ ಮೊದಲ ಭಾನುವಾರ ಜಾರಿಗೆ ಬರಲಿವೆ. ನಿನ್ನೆ ನಡೆದ ಕೊರೊನಾ ಪರಿಶೀಲನಾ ಸಭೆಯಲ್ಲಿ 23 ಮತ್ತು 30 ರಂದು ಲಾಕ್‌ಡೌನ್ ಗೆ ಹೋಲುವ ನಿರ್ಬಂಧಗಳನ್ನು ವಿಧಿಸಲು ನಿರ್ಧರಿಸಲಾಯಿತು.
ಬಿವರೇಜಸ್ ಮತ್ತು ಕನ್ಸ್ಯೂಮರ್ ಫೆಡ್‌ನ ಮದ್ಯದಂಗಡಿಗಳು ನಾಳೆ ತೆರೆಯುವುದಿಲ್ಲ. ಏತನ್ಮಧ್ಯೆ, ಶೇಂದಿ ಅಂಗಡಿಗಳು ತೆರೆದಿರುತ್ತವೆ. ನಾಳೆ ಮತ್ತು ಮುಂದಿನ ಭಾನುವಾರವೂ ಬಾರ್‌ಗಳು ಮುಚ್ಚಲ್ಪಡುತ್ತವೆ.
ಭಾನುವಾರದಂದು ಅಗತ್ಯ ಸೇವೆಗಳು ಮಾತ್ರ ಲಭ್ಯವಿರುತ್ತವೆ. ಗಡಿ ಪ್ರದೇಸ ಸಹಿತ ಎಲ್ಲಾ ರಸ್ತೆಗಳಲ್ಲಿ ಪೊಲೀಸ್ ತಪಾಸಣೆಯನ್ನು ಬಿಗಿಗೊಳಿಸಲಾಗುವುದು. ಹೋಟೆಲ್‌ಗಳಲ್ಲಿ ಪಾರ್ಸೆಲ್ ಸೇವೆಯನ್ನು ಮಾತ್ರ ಅನುಮತಿಸಲಾಗುವುದು. ಅಂತ್ಯಕ್ರಿಯೆ ಮತ್ತು ವಿವಾಹ ಸಮಾರಂಭದಲ್ಲಿ 20 ಜನರು ಮಾತ್ರ ಭಾಗವಹಿಸಬಹುದು.