HEALTH TIPS

ಕಳುವಾದ ಮೊಬೈಲ್ ಹ್ಯಾಂಡ್ ಸೆಟ್ ಗಳ ಬಳಕೆ ತಡೆಗೆ ಡಿಜಿಟಲ್ ಕ್ರಿಯಾ ಯೋಜನೆಗೆ ಭಾರತ, ಆಸಿಯಾನ್ ಅನುಮೋದನೆ

         ನವದೆಹಲಿ: ಕಳುವಾದ ಮೊಬೈಲ್ ಹಾಗೂ ನಕಲಿ ಮೊಬೈಲ್ ಹ್ಯಾಂಡ್‌ಸೆಟ್‌ಗಳ ಬಳಕೆಯನ್ನು ನಿರ್ಬಂಧಿಸುವುದಕ್ಕಾಗಿ ಕ್ರಿಯಾ ಯೋಜನೆಯೆಡೆಗೆ ಕಾರ್ಯನಿರ್ವಹಿಸಲು ಭಾರತ ಹಾಗೂ ಆಸಿಯಾನ್ ರಾಷ್ಟ್ರಗಳು ಅನುಮೋದನೆ ನೀಡಿವೆ.

            ವರ್ಚ್ಯುಯಲ್ ಆಗಿ ನಡೆದ ಭಾರತದಿದೊಂದಿಗೆ ನಡೆದ ಆಸಿಯಾನ್ ಡಿಜಿಟಲ್ ಮಿನಿಸ್ಟ್ರೀಸ್ (ಎಡಿಜಿಎಂಐಎನ್) ಸಭೆಯಲ್ಲಿ ಭಾರತ-ಆಸಿಯಾನ್ ಡಿಜಿಟಲ್ ವರ್ಕ್ ಪ್ಲಾನ್-2022 ಯೋಜನೆಗೆ ಅನುಮೋದನೆ ನೀಡಲಾಗಿದ್ದು,

            ನಕಲಿ, ಕಳುವಾಗಿರುವ ಮೊಬೈಲ್ ಬಳಕೆಯನ್ನು ನಿರ್ಬಂಧಿಸುವುದು, ವೈಫೈ ಆಕ್ಸಿಸ್ ನೆಟ್ವರ್ಕ್ ಇಂಟರ್ಫ್ರೇಸ್ ಆಫ್ ನ್ಯಾಷನಲ್ ಪಬ್ಲಿಕ್ ಇಂಟರ್ ನೆಟ್, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳ ಕ್ಷೇತ್ರಗಳ ಪೈಕಿ ಇಂಟರ್ ನೆಟ್ ಆಫ್ ಥಿಂಗ್ಸ್ (ಐಒಟಿ) 5 ಜಿ, ಅತ್ಯಾಧುನಿಕ ಉಪಗ್ರಹ ಸಂವಹನ, ಸೈಬರ್ ಫೋರೆನ್ಸಿಕ್ ಹಾಗೂ ಇನ್ನಿತರ ವಿಷಯಗಳನ್ನು ಉತ್ತೇಜಿಸುವುದು ಹಾಗೂ ಜ್ಞಾನ ಹಂಚಿಕೆ ಭಾರತ- ಆಸಿಯಾನ್ ಒಪ್ಪಂದದ ಪ್ರಮುಖಾಂಶಗಳಾಗಿವೆ.

          ಎಡಿಜಿಎಂಐಎನ್ 10 ಆಸಿಯಾನ್ (ಅಸೋಸಿಯೇಷನ್ ಆಫ್ ಸೌತ್-ಈಸ್ಟ್ ಏಷ್ಯನ್ ರಾಷ್ಟ್ರಗಳ) ಟೆಲಿಕಾಂ ಸಚಿವರ ಸಭೆಯಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries