ಮಂಜೇಶ್ವರ: ಕೆ.ಪಿ.ಎಸ್.ಟಿ.ಎ ಮಂಜೇಶ್ವರ ಉಪಜಿಲ್ಲಾ ಮಟ್ಟದ ಸ್ವದೇಶ್ ಮೆಗಾ ಕ್ವಿಜ್ 2022 ಜಿ. ಎಲ್.ಪಿ.ಎಸ್ ಮುಳಿಂಜ ಶಾಲೆಯಲ್ಲಿ ಜರಗಿತು. ಕಿರಿಯ, ಹಿರಿಯ ಪ್ರಾಥಮಿಕ, ಹೈಸ್ಕೂಲು ಹಾಗೂ ಹೈಯರ್ ಸೆಕೆಂಡರಿ ವಿಭಾಗಗಳ ಸ್ಪರ್ಧೆಯಲ್ಲಿ ಮಕ್ಕಳು ಭಾಗವಹಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಮಂಜೇಶ್ವರ ಉಪಜಿಲ್ಲಾ ಕೆ. ಪಿ ಎಸ್ ಟಿ ಎ ಅಧ್ಯಕ್ಷ ವಿಮಲ್ ಅಡಿಯೋಡಿ ವಹಿಸಿದರು. ಕೆ.ಪಿ. ಎಸ್.ಟಿ.ಎ ಪ್ರಾಂತ್ಯ ಅಲ್ಪಸಂಖ್ಯಾತ ವಿಭಾಗ ಅಧ್ಯಕ್ಷ ಶ್ರೀನಿವಾಸ. ಕೆ. ಎಚ್. ಉದ್ಘಾಟಿಸಿದರು. ಪ್ರಸೀದಾ ಕುಮಾರಿ, ರಹಮತ್, ಪುಷ್ಪಲತಾ ಟೀಚರ್ ಶುಭಾಶಂಸನೆಗೈದರು. ಎಲ್ಲಾ ವಿಭಾಗಗಳಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಪ್ರಥಮ, ದ್ವಿತೀಯ ಸ್ಥಾನ ಗಳಿಸಿದವರಿಗೆ ಫಲಕ ಮತ್ತು ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. ಉಪ ಜಿಲ್ಲಾ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ತರ್ ಸ್ವಾಗತಿಸಿ, ಕೋಶಾಧಿಕಾರಿ ಜಬ್ಬಾರ್ ಬಾಕ್ರಬೈಲ್ ವಂದಿಸಿದರು.
ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಪ್ರಥಮ ತನ್ವಿ (ಎಸ್.ಎಸ್.ಬಿ.ಎ. ಯು. ಪಿ.ಎಸ್ ಐಲ), ದ್ವಿತೀಯ ಸಮೃದ್ಧ್(ಡಿ.ಬಿ.ಎ ಯು ಪಿ ಎಸ್ ಕಯ್ಯಾರ್), ತೃತೀಯ ಸಿಮ್ರಾ ಆಯಿಶ (ಜಿ ಡಬ್ಲ್ಯೂ ಎಲ್ ಪಿ ಎಸ್ ಮಂಜೇಶ್ವರ) ಪಡೆದುಕೊಂಡರು. ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಪ್ರಥಮಕೆ.ಪಿ ಪೂಜಾ ಲಕ್ಷ್ಮಿ( ಎಸ್. ಜೆ.ಎ. ಯು. ಪಿ.ಎಸ್ ಕಳಿಯೂರು), ದ್ವಿತೀಯ ಆವಣಿ .ಕೆ.ವಿ(ಜಿ. ಎಚ್ ಎಸ್. ಕಡಂಬಾರು), ತೃತೀಯ ಡೇನಿಕಾ ಪಹಲ್ (ಡಿ.ಬಿ.ಎ. ಯು .ಪಿ. ಎಸ್ ಕಯ್ಯಾರು), ಹೈಸ್ಕೂಲು ವಿಭಾಗದಲ್ಲಿ ಪ್ರಥಮ ಸಮರ್ಥ್. ಎನ್. ನಾಯ್ಕ್ (ಎಸ್.ವಿ. ವಿ.ಎಚ್. ಎಸ್. ಎಸ್ ಕೊಡ್ಲಮೊಗರು), ದ್ವಿತೀಯ ಚಿನ್ಮಯ ಕೃಷ್ಣ ಬಿ( ಎಸ್. ವಿ. ವಿ. ಎಚ್. ಎಸ್. ಎಸ್ ಕೊಡ್ಲಮೊಗರು), ತೃತೀಯ ಸುಚಿಭ್ ಶೆಟ್ಟಿ( ಎಸ್.ಡಿ ಪಿ.ಎಚ್.ಎಸ್.ಎಸ್ ಮಂಜೇಶ್ವರ), ಹೈಯರ್ ಸೆಕೆಂಡರಿ ವಿಭಾಗದಲ್ಲಿ ಪ್ರಥಮ ಶ್ರಾವಣಿ (ಎಸ್.ಎ.ಟಿ.ಎಚ್.ಎಸ್.ಎಸ್ ಮಂಜೇಶ್ವರ) ಗಳಿಸಿಕೊಂಡರು.