ಅಮೃತಸರ: ಇಟೆಲಿಯಿಂದ ಪಂಜಾಬಿನ ಅಮೃತಸರಕ್ಕೆ ಬಂದ ಪ್ರಯಾಣಿಕರ ಕೋವಿಡ್ ವರದಿಯಲ್ಲಿ ತಪ್ಪು ನಡೆದಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ, ಖಾಸಗಿ ಲ್ಯಾಬೊರೇಟರಿ ವಿರುದ್ಧ ತನಿಖೆ ಕೈಗೊಳ್ಳಲಾಗಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿರುವುದಾಗಿ NDTV̤com ವರದಿ ಮಾಡಿದೆ.

ಇಟೆಲಿಯಿಂದ ಆಗಮಿಸಿದ್ದ ಹಲವು ಪ್ರಯಾಣಿಕರು ತಮ್ಮ ಕೋವಿಡ್ ವರದಿ ತಪ್ಪಾಗಿ ಬಂದಿದೆ ಎಂದು ಆರೋಪಿಸಿದ್ದರು. ವಿಮಾನ ಹತ್ತುವ ಮೊದಲು ಪರೀಕ್ಷೆ ನಡೆಸಿದಾಗ ಕೋವಿಡ್ ನೆಗೆಟಿವ್ ಇತ್ತಾಗಿಯೂ, ವಿಮಾನದಿಂದ ಇಳಿಯುವ ಹೊತ್ತಿಗೆ ಕೋವಿಡ್ ಪಾಸಿಟಿವ್ ವರದಿ ಬಂದಿರುವ ಕುರಿತು ಅನುಮಾನ ವ್ಯಕ್ತಪಡಿಸಿರುವ ಪ್ರಯಾಣಿಕರು, ತಮ್ಮ ವರದಿ ತಪ್ಪಾಗಿ ಬಂದಿದೆ ಎಂದು ದೂರಿದ್ದರು.
ಅದೂ ಅಲ್ಲದೆ, ಕೆಲವು ಪ್ರಯಾಣಿಕರನ್ನು ಮರು ಪರೀಕ್ಷೆಗೆ ಒಳಪಡಿಸಿದ್ದು, ಎರಡನೇ ಬಾರಿ ಕೋವಿಡ್ ನೆಗೆಟಿವ್ ವರದಿ ಬಂದಿತ್ತು. ಇದು ಪ್ರಯಾಣಿಕರ ಆರೋಪಕ್ಕೆ ಇನ್ನಷ್ಟು ಪುಷ್ಟಿ ನೀಡಿತ್ತು.
ಆರೋಪ ಕೇಳಿ ಬಂದ ಬೆನ್ನಲ್ಲೇ, ಅಮೃತಸರ ವಿಮಾನ ನಿಲ್ದಾಣ ಅಧಿಕಾರಿಗಳು ಸ್ಥಳೀಯ ಲ್ಯಾಬೊರೇಟರಿ ಒಂದರ ಸೇವೆಯನ್ನು ಪಡೆಯಲು ತೀರ್ಮಾನಿಸಿದ್ದು, ಈ ಮೊದಲು ಸೇವೆ ಸಲ್ಲಿಸುತ್ತಿದ್ದ ದಿಲ್ಲಿ ಮೂಲದ ಲ್ಯಾಬೊರೇಟರಿ ವಿರುದ್ಧ ತನಿಖೆ ಆರಂಭಿಸಿದ್ದಾರೆ.
ಸಹಾಯಕ ಸಿವಿಲ್ ಸರ್ಜನ್ ಡಾ. ಅಮರ್‌ಜಿತ್ ಸಿಂಗ್ ಈ ಕುರಿತು ಪ್ರತಿಕ್ರಿಯಿಸಿದ್ದು, "ಲ್ಯಾಬ್‌ನ ದೋಷಪೂರಿತ ಕೆಲಸಗಳ ವಿರುದ್ಧ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದಿಂದ ತನಿಖೆಯನ್ನು ಪ್ರಾರಂಭಿಸಲಾಗಿದೆ. ಪ್ರಸ್ತುತ ದೆಹಲಿ ಮೂಲದ ಲ್ಯಾಬ್‌ನ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಸ್ಥಳೀಯ ಲ್ಯಾಬ್ ಒಂದು ತನ್ನ ಕೆಲಸವನ್ನು ಪುನರಾರಂಭಿಸಿದೆ." ಎಂದು ತಿಳಿಸಿದ್ದಾರೆ.