ಕಾಸರಗೋಡು: ಮನ್ನತ್ ಅವರ ನೆರವಿನಿಂದ ಕೇರಳದಲ್ಲಿ ಮೊದಲ ಕಮ್ಯುನಿಸ್ಟ್ ಮಂತ್ರಿ ಮಂಡಲ ಅಧಿಕಾರಕ್ಕೆ ಬಂದಿತ್ತು ಎಂದು ಕಮ್ಯುನಿಸ್ಟ್ ಮುಖಂಡ ಕುಟ್ಟಿಕಲ್ ಪಿ.ಗೋಪಾಲನ್ ಮಾಸ್ತರ್ ಹೇಳಿದರು.
ಎನ್.ಎಸ್.ಎಸ್. ಕಾಸರಗೋಡು ತಾಲೂಕು ಒಕ್ಕೂಟದ ವತಿಯಿಂದ ನಡೆದ ಮನ್ನಂ ಜಯಂತಿ ಸಮಾರಂಭದಲ್ಲಿ ಅವರು ಮಾತನಾಡಿದರು.
ಚಂಗನಾಶ್ಶೇರಿಯಲ್ಲಿ ಪಿ.ಗೋಪಾಲನ್ ಮಾಸ್ತರ್ ಮನ್ನತ್ ಅವರ ನೆರವಿನಿಂದ ಶಾಲೆಯಲ್ಲಿ ಶಾಲಾ ಶಿಕ್ಷಣ ಮುಗಿಸಿದವರು. ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಮನ್ನತ್ ಪದ್ಮನಾಭನ್ ಅವರ ಕೊಡುಗೆ ಅಪಾರವಾಗಿದೆ ಎಂದು ಅವರು ಸ್ಮರಿಸಿದರು.
ಎನ್.ಎಸ್.ಎಸ್. ಆಡಳಿತ ಮಂಡಳಿ ಸದಸ್ಯ ನ್ಯಾಯವಾದಿ. ಎ.ಬಾಲಕೃಷ್ಣನ್ ನಾಯರ್ ಅಧ್ಯಕ್ಷತೆ ವಹಿಸಿದ್ದರು. ಅಲಿಚೇರಿ ಹರಿಕೃಷ್ಣನ್ ನಂಬೂದಿರಿ ಪ್ರಧಾನ ಭಾಷಣ ಮಾಡಿದರು. ಸಿ.ಭಾಸ್ಕರನ್ ನಾಯರ್, ಯು.ರಾಜಗೋಪಾಲನ್, ಸ್ಮಿತಾ ಬಾಲಕೃಷ್ಣನ್, ಎ.ದಾಮೋದರನ್ ನಾಯರ್, ಎ.ಬಾಲಕೃಷ್ಣನ್ ನಾಯರ್, ಕೆ.ರಾಧಾಕೃಷ್ಣನ್, ಕೆ.ಕೆ.ಬಾಲಕೃಷ್ಣನ್, ಎಂ.ಎಸ್. ಉಣ್ಣಿಕೃಷ್ಣನ್ ಮಾತನಾಡಿದರು.