ಕಾಸರಗೋಡು: ಕೇರಳ ಅಬಕಾರಿ ಕಾರ್ಮಿಕರ ಕಲ್ಯಾಣ ನಿಧಿ ಯೋಜನೆಯನ್ವಯ ಸದಸ್ಯರಾಗಿರುವ ವಿದೇಶಿಮದ್ಯದಂಗಡಿ, ಬಾರ್‍ಗಳಲ್ಲಿ ಕೆಲಸ ನಡೆಸುವ ಕಾರ್ಮಿಕರ ಮಕ್ಕಳಿಗೆ 2021-22ನೇ (ಪ್ರಸಕ್ತ ಕಲಿಕೆ ನಡೆಸುತ್ತಿರುವ)ಅಧ್ಯಯನ ವರ್ಷದ ಸ್ಕಾಲರ್‍ಶಿಪ್, ಪ್ರೊಫೆಶನಲ್ ಕೋರ್ಸ್‍ಗಳಿಗಳಲ್ಲಿ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳಿಗಾಗಿ ಲ್ಯಾಪ್‍ಟಾಪ್ ವಿತರಣೆಗಾಗಿರುವ ಅರ್ಜಿ ಆಹ್ವಾನಿಸಲಾಗಿದೆ. ಟಿಟಿಸಿ. ಐಟಿಐ, ಐಟಿಸಿ, ಪ್ಟಸ್‍ಟು, ಪದವಿ, ಪಿಜಿ ಪ್ರೊಫೆಶನಲ್ ಕೋರ್ಸ್‍ಗಳು, ವಿವಿಧ ಡಿಪ್ಲೊಮಾ ಸೇರಿದಂತೆ ವಿವಿಧ ಕೋರ್ಸ್‍ಗಳಿಗಾಗಿ ಅಂಗೀಕೃತ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯುತ್ತಿರುವ, ಶೇ. 50ರಷ್ಟು ಅಂಕ ಹೊಂದಿರುವವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅಬಕಾರಿ ಕಾರ್ಮಿಕರ ಕಲ್ಯಾಣ ಕ್ಷೇಮನಿಧಿ ಬೋರ್ಡ್ ವಲಯ ಕಚೇರಿಯಲ್ಲಿ ಅರ್ಜಿ ನಮೂನೆ ಲಭ್ಯವಿದ್ದು, ಅರ್ಜಿಯ ಎರಡು ಪ್ರತಿಗಳು, ಅರ್ಜಿದಾರನ ಬ್ಯಾಂಕ್ ಪಾಸ್‍ಬುಕ್ ಮಾಹಿತಿ, ಅಂಕಪಟ್ಟಿಯ ಸ್ವಯಂದೃಢೀಕರಣಗೊಳಿಸಿದ ಪ್ರತಿ, ಪ್ರಸಕ್ತ ಕಲಿಯುತ್ತಿರುವ ಸಂಸ್ಥೆ ಮೇಲಧಿಕಾರಿಯ ಸಾಕ್ಷ್ಯಪತ್ರದೊಂದಿಗೆ ಜ. 31ರ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ(0495-278809)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.