ಮಂಜೇಶ್ವರ: ಪಾವೂರು ಪೊಯ್ಯೆ ಶ್ರೀ ಚಾಮುಂಡೇಶ್ವರೀ ಕ್ಷೇತ್ರದಲ್ಲಿ ಪುದ್ವಾರಮೆಚ್ಚಿ ನೇಮೋತ್ಸವ ಜ. 31ರಂದು ಜರುಗಲಿದೆ.ಪೊಯ್ಯೆ ಶ್ರೀ ಚಾಮುಂಡೇಶ್ವರೀ, ಬಂಟ ಹಾಗೂ ಪರಿವಾರ ದೈವಗಳಿಗೆ ಪ್ರಾಚೀನ ಕಟ್ಟುಕಟ್ಟಳೆಯನ್ವಯ ನೇಮೋತ್ಸವ ನಡೆದುಬರಲಿದೆ. ಜ. 30ರಂದು ಬೆಳಗ್ಗೆ 9ಕ್ಕೆ ನೇಮದ ಚಪ್ಪರ ಏರಿಸುವುದು, 31ರಂದು ಬೆಳಗ್ಗೆ 9.30ರಿಂದ ಶ್ರೀ ಚಾಮುಂಡೇಶ್ವರೀ ದೈವದ ನೇಮೋತ್ಸವ, ಸಂಜೆ 4ಕ್ಕೆ ಪರಿವಾರ ದಐವಗಳ ನೇಮ, 6ಕ್ಕೆ ಬಂಟ ದೈವದ ನೇಮ, 7ಕ್ಕೆ ಶ್ರೀ ದೈವಗಳ ಭಂಡಾರ ಇಳಿಯುವ ಕಾರ್ಯಕ್ರಮ ನಡೆಯುವುದು.