HEALTH TIPS

ಕೊರೊನಾ: ರಾಜ್ಯದಲ್ಲಿ ಇಂದು ೨೫೬೦ ಮಂದಿ ಹೊಸ ಸೋಂಕಿತರು: ೪೩,೨೧೦ ಮಾದರಿಗಳ ಪರೀಕ್ಷೆ

             ತಿರುವನಂತಪುರ: ರಾಜ್ಯದಲ್ಲಿ ಇಂದು ೨೫೬೦ ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ತಿರುವನಂತಪುರ ೫೮೩, ಎರ್ನಾಕುಳಂ ೪೧೦, ಕೋಝಿಕ್ಕೋಡ್ ೨೭೧, ಕೊಟ್ಟಾಯಂ ೧೯೯, ತ್ರಿಶೂರ್ ೧೮೮, ಕಣ್ಣೂರು ೧೮೪, ಕೊಲ್ಲಂ ೧೪೧, ಮಲಪ್ಪುರಂ ೧೨೩, ಪತ್ತನಂತಿಟ್ಟ ೧೧೭, ಆಲಪ್ಪುಳ ೯೪, ಪಾಲಕ್ಕಾಡ್ ೮೦, ಇಡುಕ್ಕಿ ೬೫, ವಯನಾಡ್ ೬೨, ಕಾಸರಗೋಡು ೪೩ ಎಂಬಂತೆ ಸೋಂಕು ದೃಢಪಡಿಸಲಾಗಿದೆ. ಕಳೆದ ೨೪ ಗಂಟೆಗಳಲ್ಲಿ ೪೩,೨೧೦ ಮಾದರಿಗಳನ್ನು ಪರೀಕ್ಷಿಸಲಾಗಿದೆ.

             ರಾಜ್ಯದ ೫ ಸ್ಥಳೀಯಾಡಳಿತ ವ್ಯಾಪ್ತಿಯ ೬ ವಾರ್ಡ್ಗಳಲ್ಲಿ ವಾರದ ಸೋಂಕಿನ ಜನಸಂಖ್ಯೆಯ ಅನುಪಾತವು ೧೦ ಕ್ಕಿಂತ ಹೆಚ್ಚಿದೆ. ಇಲ್ಲಿ ಕಟ್ಟುನಿಟ್ಟಿನ ನಿಯಂತ್ರಣ ಇರಲಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ ೧,೦೪,೫೦೬ ಮಂದಿ ಜನರು ನಿಗಾದಲ್ಲಿದ್ದಾರೆ. ಇವರಲ್ಲಿ ೧,೦೨,೨೮೧ ಮಂದಿ ಮನೆ/ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದಾರೆ ಮತ್ತು ೨೨೨೫ ಮಂದಿ ಆಸ್ಪತ್ರೆಯ ನಿಗಾದಲ್ಲಿದ್ದಾರೆ. ಒಟ್ಟು ೧೬೭ ಮಂದಿ ಹೊಸದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

              ಪ್ರಸ್ತುತ, ೧೯,೩೫೯ ಕೋವಿಡ್ ಪ್ರಕರಣಗಳಲ್ಲಿ, ಕೇವಲ ೧೦.೪ ಶೇಕಡ ಜನರು ಮಾತ್ರ ಆಸ್ಪತ್ರೆಗಳು / ಸ್ಥಳೀಯ  ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಕಳೆದ ೨೪ ಗಂಟೆಗಳಲ್ಲಿ ಕೋವಿಡ್ ಬಾಧಿಸಿ ೩೦ ಮಂದಿ ರಾಜ್ಯಾದ್ಯಂತ ಮೃತರಾಗಿದ್ದಾರೆ. ಅಲ್ಲದೆ, ಸುಪ್ರೀಂ ಕೋರ್ಟ್ನ ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಕೇಂದ್ರ ಸರ್ಕಾರ ಮೇಲ್ಮನವಿ ಸಲ್ಲಿಸಿದ ೪೧ ಸಾವುಗಳು ವರದಿಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ ೪೮,೧೮೪ಕ್ಕೆ ಏರಿಕೆಯಾಗಿದೆ.

            ಇಂದು ಸೋಂಕು ಪತ್ತೆಯಾದವರಲ್ಲಿ ೪೮ ಮಂದಿ ಹೊರ ರಾಜ್ಯದವರು. ೨೩೩೯ ಮಂದಿ ಜನರು ಸಂಪರ್ಕದಿಂದ ಸೋಂಕಿಗೆ ಒಳಗಾಗಿದ್ದಾರೆ. ೧೫೭ ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಇಂದು ೧೬ ಮಂದಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ದೃಢಪಡಿಸಲಾಗಿದೆ.  ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ೨೧೫೦ ಮಂದಿ ಜನರು ಗುಣಮುಖರಾಗಿದ್ದಾರೆ.

             ತಿರುವನಂತಪುರ ೫೫೬, ಕೊಲ್ಲಂ ೯೮, ಪತ್ತನಂತಿಟ್ಟ ೧೨೦, ಆಲಪ್ಪುಳ ೯೨, ಕೊಟ್ಟಾಯಂ ೨೦೧, ಇಡುಕ್ಕಿ ೪೫, ಎರ್ನಾಕುಳಂ ೨೮೦, ತ್ರಿಶೂರ್ ೧೩೨, ಪಾಲಕ್ಕಾಡ್ ೬೦, ಮಲಪ್ಪುರಂ ೯೫, ಕೋಯಿಕ್ಕೋಡ್ ೨೧೬, ವಯನಾಡ್ ೭೮,ಕಣ್ಣೂರು ೧೪೫,  ಕಾಸರಗೋಡು ೩೨ ಮಂದಿಗಳು ಚಿಕಿತ್ಸೆಯಲ್ಲಿ ಗುಣಮುಖರಾಗಿದ್ದಾರೆ. ಇದರೊಂದಿಗೆ ೧೯,೩೫೯ ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ ೫೧,೮೬,೭೩೭ ಮಂದಿ ಕೊರೊನಾದಿಂದ ಮುಕ್ತರಾಗಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries