ಕುಂಬಳೆ: ಗೋವು ಮತ್ತು ಮೇವಿನ ಮಧ್ಯೆ ನಾವು ಸೇತುವೆಯಾಗಬೇಕು. ಮೇವು - ನಾವು ಎಂಬ ಸಂಕೋಲೆ ಸುದೃಢ ಸಮಾಜ ನಿರ್ಮಿಸುತ್ತದೆ. ಗೋವು - ಮೇವು - ನಾವು ಎಂಬ ಅಮೃತದ ಸಂಕೋಲೆ ನಿರ್ಮಾಣವಾಗಬೇಕು ಎಂದು ಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರು ನುಡಿದರು.
ಶ್ರೀಗಳ ಮಾರ್ಗದರ್ಶನದಲ್ಲಿ ಕಾರ್ಯವೆಸಗುವ ಹವ್ಯಕ ಮಹಾಮಂಡಲಾಂತರ್ಗತ ಮುಳ್ಳೇರಿಯ ಮಂಡಲದ ವಿದ್ಯಾರ್ಥಿ ವಾಹಿನಿ ನೇತೃತ್ವದಲ್ಲಿ ಇತ್ತೀಚೆಗೆ ಬಜಕ್ಕೂಡ್ಲು ಎಂದು ಕೊಂಡೆವೂರು ಶ್ರೀ ನಿತ್ಯಾನಂದಾಶ್ರಮದ ಗೋಶಾಲೆಗೆ ಮುಳಿಹುಲ್ಲನ್ನು ಸಂಗ್ರಹಿಸಿ ಸಾಗಿಸುವ ವಿಶಿಷ್ಟ ಕಾರ್ಯಕ್ರಮದ ಅಂಗವಾಗಿ ಶ್ರೀಗಳವರು ತಮ್ಮ ಸಂದೇಶದಲ್ಲಿ ನುಡಿದರು.
ಕುಂಬಳೆಗೆ ಸಮೀಪದ ಅತ್ಯಂತ ಪುರಾತನವಾದ ಐತಿಹ್ಯವಿರುವ ಅಂಬಿಲಡ್ಕ ಶ್ರೀ ಪೂಮಾಣಿ ಕಿನ್ನಿಮಾಣಿ ದೈವಸ್ಥಾನಕ್ಕೆ ಸೇರಿದ ವಿಶಾಲವಾದ ಅಡ್ಕದಲ್ಲಿ ಭಾನುವಾರ ನಡೆದ ಗೋವಿಗಾಗಿ ಮೇವು, ಸೇವಾಅಘ್ರ್ಯ ಕಾರ್ಯಕ್ರಮಕ್ಕೆ ನೀಡಿದ ಸಂದೇಶದಲ್ಲಿ ಅವರು ಸಂದೇಶ ನೀಡಿ ಮಾತನಾಡಿದರು.
ಮೂರು ಲೋಡ್ ಹುಲ್ಲನ್ನು ಕತ್ತರಿಸಿ ಲಾರಿಗಳಿಗೆ ತುಂಬಿಸಿ ಗೋಶಾಲೆಗಳಿಗೆ ಸಾಗಿಸಲಾಯಿತು.
ಬೆಳಗ್ಗೆ ಶ್ರೀ ಪೂಮಾಣಿ ಕಿನ್ನಿಮಾಣಿ ದೈವಸ್ಥಾನದ ಮುಂದೆ ಪ್ರಾರ್ಥನೆ ಮತ್ತು ಶ್ರೀ ಗುರುವಂದನೆಯೊಂದಿಗೆ ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆ ನೀಡಲಾಯಿತು. ವಿದ್ಯಾರ್ಥಿಗಳೇ ಶ್ರೀಗೋಧ್ವಜವನ್ನು ಆರೋಹಣ ಮಾಡಿದರು. ನೂರಕ್ಕೂ ಮಿಕ್ಕಿದ ಪುಟಾಣಿಗಳಿಂದ ಹಿಡಿದು ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ವರೆಗೆ ಅತ್ಯಂತ ಉತ್ಸಾಹದಿಂದ ಮಕ್ಕಳು ಮುಳಿಹುಲ್ಲು ಸಂಗ್ರಹದಲ್ಲಿ ತೊಡಗಿದರು.ಕುಂಬಳೆ ಪ್ರದೇಶದಲ್ಲಿ ನಡೆಯುವ ಹೆಚ್ಚಿನ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ನವಸೇವಾವೃಂದ ಮತ್ತು ನವಸೇವಾ ಮಹಿಳಾ ಸಂಘ ಅಂಬಿಲಡ್ಕ ಇದರ ಸದಸ್ಯರು ತಮ್ಮ ರಜಾದಿನವನ್ನು ಈರೀತಿಯಲ್ಲಿ ಗೋಸೇವೆಯ ಮೂಲಕ ಸದುಪಯೋಗ ಮಾಡಿಕೊಂಡರು.
ಮುಳ್ಳೇರಿಯ ಹವ್ಯಕ ಮಂಡಲ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ, ಹವ್ಯಕ ಮಹಾಮಂಡಲ ಮಾತೃತ್ವಂ ವಿಭಾಗಾಧ್ಯಕ್ಷೆ ಈಶ್ವರಿ ಬೇರ್ಕಡವು, ಹವ್ಯಕ ಮಹಾಸಭಾ ಬೆಂಗಳೂರು ಇದರ ಕಾಸರಗೋಡು ಜಿಲ್ಲಾ ಪ್ರತಿನಿಧಿ ವೈಕೆ ಗೋವಿಂದ ಭಟ್, ಡಾ ಮಾಲತಿ ಪ್ರಕಾಶ, ಮಹಾಮಂಡಲ ವಿದ್ಯಾರ್ಥಿ ವಾಹಿನಿ ಪ್ರಧಾನ ಗುರುಮೂರ್ತಿ ಮೇಣ, ಮುಳ್ಳೇರಿಯ ಹವ್ಯಕ ಮಂಡಲ ಉಪಾಧ್ಯಕ್ಷೆ ಕುಸುಮ ಪೆರ್ಮುಖ, ಮುಳ್ಳೇರಿಯ ಮಂಡಲ ವಿದ್ಯಾರ್ಥಿ ವಾಹಿನೀ ವಿಭಾಗ ಪ್ರಧಾನ ಶ್ಯಾಮ ಪ್ರಸಾದ ಕುಳಮರ್ವ, ಮುಳ್ಳೇರಿಯ ಮಂಡಲ ಮಾತೃವಿಭಾಗ ಪ್ರಧಾನರಾದ ಗೀತಾಲಕ್ಮೀ ಮುಳ್ಳೇರಿಯಾ ಕಾರ್ಯಕ್ರಮಕ್ಕೆ ನೇತೃತ್ವ ವಹಿಸಿದರು.
ಅಮೃತಧಾರಾ ಗೋಶಾಲೆಯ ಅಧ್ಯಕ್ಷ ಜಗದೀಶ ಬಿ ಜಿ ಮತ್ತು ತಂಡದವರು ಸಹಕರಿಸಿದರು ಮಾಹಾಮಂಡಲದ ಮಹೇಶ ಎಳ್ಳಿಯಡ್ಕ, ಶಾಮಪ್ರಾಸದ ಸರಳಿ, ವಿವಿಧ ವಲಯ ಪದಾಧಿಕಾರಿಗಳು, ಗೋಬಂಧುಗಳು ಉಪಸ್ಥಿತರಿದ್ದರು.
ಸಾಮಾಜಿಕ ಮುಂದಾಳು, ಕ್ಯಾಂಪೆÇ್ಕೀ ಸಂಸ್ಥೆಯ ನಿರ್ದೇಶಕ ಸುರೇಶ್ ಕುಮಾರ್ ಶೆಟ್ಟಿ ಪೂಕಟ್ಟೆ ಅವರು ಸೇವಾ ಅಘ್ರ್ಯದ ಸಂದರ್ಭ ಭೇಟಿನೀಡಿ ಕಾರ್ಯಕರ್ತರನ್ನು ಅಭಿನಂದಿಸಿದರು.
ಗುಂಪೆ ವಲಯದ ಅಧ್ಯಕ್ಷರಾದ ಶಂಭು ಹೆಬ್ಬಾರ್ ಸ್ವಾಗತಿಸಿ ಗುಂಪೆ ವಲಯದ ಕಾರ್ಯದರ್ಶಿ ಕೇಶವಪ್ರಸಾದ ಎಡಕ್ಕಾನ ವಂದಿಸಿದರು.
ಬಿಸಿಲಿನ ಝಳವನ್ನು ಲೆಕ್ಕಿಸಿದೆ ಮುಳಿಹುಲ್ಲು ಸಂಗ್ರಹಿಸುವ ಕಾರ್ಯದಲ್ಲಿ ಯಶಸ್ವಿಯಾಗಿ ಸೇವಾ ಅಘ್ರ್ಯ ನಡೆಸಿಕೊಟ್ಟ ಎಲ್ಲರನ್ನೂ ಸಾಮಾಜಿಕ ಮುಂದಾಳುಗಳು ಅಭಿನಂದಿಸಿದರು.
ಮಕ್ಕಳ ಉತ್ಸಾಹ ಈ ಕಾರ್ಯಕ್ರಮಕ್ಕೆ ಹಲವೆಡೆಗಳಿಂದ ಕೊಡುಗೆಗಳು ಒಂದಷ್ಟು ಹರಿದು ಬಂದುವು. ಅನನ್ಯಾ ಫೀಡ್ಸ್ ಹುಬ್ಬಳ್ಳಿ ಸಂಸ್ಥೆಯವರು ಬಿಸಿಲು ತಡೆಯುವ ಟೋಪಿಗಳನ್ನು ಕೊಡುಗೆಯಾಗಿ ಕೊಟ್ಟರು. ಹವ್ಯಕ ಮಹಾಸಭಾ ಬೆಂಗಳೂರು ಇವರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೆ ಸ್ಮರಣಿಕೆಯಾಗಿ ಪುಸ್ತಕಗಳನ್ನು ವಿತರಿಸಿದರು. ಪುಸ್ತಕ ವಿತರಣೆಯ ಉದ್ಘಾಟನೆಯನ್ನು ಗೋವಿಗಾಗಿ ಮೇವು ಕಾರ್ಯಕ್ರಮದ ರೂವಾರಿ ಕಾಮದುಘಾ ಟ್ರಸ್ಟ್ ಅಧ್ಯಕ್ಷರಾದ ಡಾ. ವೈ.ವಿ. ಕೃಷ್ಣಮೂರ್ತಿ ಇವರು ನಿರ್ವಹಿಸಿದರು.