ಕಾಸರಗೋಡು: ಕೋವಿಡ್ ಹಿನ್ನೆಲೆಯಲ್ಲಿ ಶನಿವಾರ ಮತ್ತು ಭಾನುವಾರ ದಿವಸಗಳಂದು 12ರೈಲುಗಳು ರದ್ದುಗೊಂಡ ಹಿನ್ನೆಲೆಯಲ್ಲಿ ಪ್ರಯಾಣಿಕರು ಪರದಾಡುವ ಸ್ಥಿತಿ ಎದುರಾಗಿತ್ತು. ಲೋಕೋ ಪೈಲಟ್‍ಗಳಲ್ಲಿ ಕಾಣಿಸಿಕೊಂಡ ಕೋವಿಡ್ ಹಾಗೂ ಕೋವಿಡ್ ನಿಯಂತ್ರಣ ಹಿನ್ನೆಲೆಯಲ್ಲಿ ರೈಲು ಸಂಚಾರ ಸ್ಥಗಿತಗೊಳಿಸಲಾಗಿತ್ತು. ತಿರುವನಂತಪುರ ಡಿವಿಶನಿನ ನಾಲ್ಕು ಹಾಗೂ ಪಾಲಕ್ಕಾಡ್ ಡಿವಿಶನಿನ ಎಂಟು ರೈಲುಗಳನ್ನು ರದ್ದುಗೊಳಿಸಲಾಘಿತ್ತು. ಇದರಲ್ಲಿ ನಾಲ್ಕು ರೈಲುಗಳ ಕಾಸರಗೋಡನ್ನು ಹಾದುಹೋಗುವವುಗಳಾಗಿದೆ.
ಕಣ್ಣೂರು-ಮಂಗಳೂರು ಸೆಂಟ್ರಲ್-ಕಣ್ಣೂರು ಅನ್ ರಿಸರ್ವ್‍ಡ್ ಎಕ್ಸ್‍ಪ್ರೆಸ್ ಸ್ಪೆಶ್ಯಲ್, ಕೋಯಿಕ್ಕೋಡ್-ಕಣ್ಣೂರು-ಚೆರ್ವತ್ತೂರ್ ಅನ್ ರಿಸರ್ವ್‍ಡ್ ಎಕ್ಸ್‍ಪ್ರೆಸ್ ಸ್ಪೆಶ್ಯಲ್, ಚೆರ್ವತ್ತೂರು-ಮಂಗಳೂರು ಸೆಂಟ್ರಲ್ ಅನ್ ರಿಸರ್ವ್‍ಡ್ ಎಕ್ಸ್‍ಪ್ರೆಸ್ ಸ್ಪೆಶ್ಯಲ್, ಮಂಗಳೂರು ಸೆಂಟ್ರಲ್-ಕೋಯಿಕ್ಕೋಡ್ ಎಕ್ಸ್‍ಪ್ರೆಸ್ ರೈಲುಗಳು ಕಾಸರಗೋಡು ಮೂಲಕ ಸಂಚರಿಸುತ್ತಿದ್ದ ರೈಲುಗಳಾಗಿವೆ. ರೈಲುಗಳು ರದ್ದುಗೊಂಡ ಹಿನ್ನೆಲೆಯಲ್ಲಿ ಇತರ ಜಿಲ್ಲೆಗಳಿಗೆ ಚಿಕಿತ್ಸೆ, ಶಿಕ್ಷಣ, ಉದ್ಯೋಗಕ್ಕಾಗಿ ಸಂಚರಿಸುವವರಿಗೆ ಹೆಚ್ಚಿನ ಸಮಸ್ಯೆ ಉಂಟಾಗಿತ್ತು. ಮುಂದಿನ ದಿನಗಳಲ್ಲಿ ಈ ರೈಲುಗಳ ಸಂಚಾರ ಸ್ಥಗಿತಗೊಳಿಸದಿರುವಂತೆ ಪ್ರಯಾಣಿಕರು ಆಗ್ರಹಿಸಿದ್ದಾರೆ.