ಕುಂಬಳೆ: ಹಿರಿಯ ಪತ್ರಕರ್ತ ನಾಂಗಿ ಅಬ್ದುಲ್ಲ ಮಾಸ್ತರ್ ಅವರ ಸ್ಮರಣಾರ್ಥ ಕುಂಬಳೆ ಪ್ರೆಸ್ ಪೋರಂ ಸಭಾಂಗಣಕ್ಕೆ ನಾಮಕರಣ ಮಾಡಲಾಗುತ್ತಿದ್ದು, ಇಂದು ಸಂಜೆ 4.30ಕ್ಕೆ ಸಮಾರಂಭ ನಡೆಯಲಿದೆ.
ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಉದ್ಘಾಟಿಸುವರು. ಕುಂಬಳೆ ಗ್ರಾಮ ಪಂಚಾಯತಿ ಅಧ್ಯಕ್ಷೆ ತಾಹಿರಾ ಯೂಸುಫ್ ಅಧ್ಯಕ್ಷತೆ ವಹಿಸುವರು. ಕಾಸರಗೋಡು ಬ್ಲಾಕ್ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಲೆ, ಮಹಮ್ಮದ್ ಅಲಿ ನಾಂಗಿ, ಕಾರವಾಲ್ ಪ್ರಧಾನ ಸಂಪಾದಕ ಎಸ್. ಸುರೇಂದ್ರನ್, ಕೆ.ಜೆ.ಯು. ಜಿಲ್ಲಾಧ್ಯಕ್ಷ ಅಬ್ದುಲ್ ಲತೀಫ್ ಉಳುವಾರ್, ಮಾತೃಭೂಮಿ ಬ್ಯೂರೋ ಮುಖ್ಯಸ್ಥ ಕೆ. ರಾಜೇಶ್ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಪ್ರೆಸ್ ಪೋರಂ ಅಧ್ಯಕ್ಷ ಲತೀಫ್ ಉಪ್ಪಳ, ಕೆ. ಜೆ. ಯು ಜಿಲ್ಲಾ ಉಪಾಧ್ಯಕ್ಷ ಪುರುಷೋತ್ತಮ ಭಟ್, ಕೆ.ಎಂ.ಎ ಸತ್ತಾರ್ ಮಾಸ್ತರ್, ಸುರೇಂದ್ರನ್ ಮಾಸ್ತರ್ ಉಪಸ್ಥಿತರಿರುವರು. ಪ್ರೆಸ್ ಪೋರಂ ಕಾರ್ಯದರ್ಶಿ ಅಬ್ದುಲ್ಲ ಕುಂಬಳೆ, ಕೋಶಾಧಿಕಾರಿ ಲತೀಫ್ ಕುಂಬಳೆ ಮೊದಲಾದವರು ನೇತೃತ್ವ ವಹಿಸುವರು.